ಕ್ರಿಸ್ ಮಸ್ ಗೆ ಬಂತು ``ಬನಾರಸ್`` ಚಿತ್ರದ ಹೊಸ ಪೋಸ್ಟರ್‌
Posted date: 27 Mon, Dec 2021 08:22:23 AM
ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ - ಸೋನಾಲ್ ಮಾಂಟೆರೊ ನಾಯಕ,‌ ನಾಯಕಿಯಾಗಿ ನಟಿಸಿರುವ, ಜಯತೀರ್ಥ ನಿರ್ದೇಶಿಸಿರುವ ಪ್ಯಾನ್ ಇಂಡಿಯಾ ಸಿನಿಮಾ  ``ಬನಾರಸ್``. 
 ಚಿತ್ರದ ನೂತನ‌ ಪೋಸ್ಟರ್ ಕ್ರಿಸ್ ಮಸ್ ಹಬ್ಬಕ್ಕೆ ಬಿಡುಗಡೆಯಾಗಿದೆ. 

ಇತ್ತೀಚೆಗೆ ಬಿಡುಗಡೆಯಾಗಿರುವ ಫಸ್ಟ್ ಲುಕ್ ಹಾಗೂ ಮೋಷನ್ ಪೋಸ್ಟರ್ ಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಚಿತ್ರ ಜನವರಿಯಲ್ಲಿ ತೆರೆಗೆ ಬರಲಿದೆ.  

ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಮೂಲಕ ತಿಲಕ್ ರಾಜ್ ಬಲ್ಲಾಳ್ ಈ    ಚಿತ್ರ ನಿರ್ಮಾಣ ಮಾಡಿದ್ದಾರೆ. 
ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ‌ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರದ ಸಂಕಲನಕಾರರು.

ಐದು ಭಾಷೆಗಳಲ್ಲಿ ಅದ್ದೂರಿಯಾಗಿ 
``ಬನಾರಸ್``ನಿರ್ಮಾಣವಾಗಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed