ಚಿತ್ರವೊಂದರ ಬಿಡುಗಡೆಯ ದಿನ ಹತ್ತಿರವಾಗುತ್ತಿದ್ದಂತೆ ಅದನ್ನು ಜನರಿಗೆ ತಲುಪಿಸಲು ಚಿತ್ರತಂಡ ಟ್ರೈಲರ್, ವೀಡಿಯೋಸಾಂಗ್ ಹೀಗೆ ಹಲವಾರು ರೀತಿಯಲ್ಲಿ ಪ್ರಚಾರ ಮಾಡುತ್ತದೆ. ತನ್ನ ವಿಶೇಷತೆಗಳಿಂದಲೇ ದೊಡ್ಡಮಟ್ಟದ ಕುತೂಹಲ ಕೆರಳಿಸುತ್ತಲೇ ಬಂದಿರುವ, ತಂದೆ ಮಗಳ ನಡುವಿನ, ಬಾಂಧವ್ಯದ ಸುತ್ತ ಹೆಣೆಯಲಾದ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಇರುವ ಜೂಲಿಯೆಟ್ 2 ಚಿತ್ರ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪ್ರೊಮೋಷನಲ್ ವೀಡಿಯೋ ಫ್ಯೂರಿ ಆಫ್ ಜೂಲಿಯೆಟ್ ಇಂದು ಸಂಜೆ 6.10ಕ್ಕೆ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗುತ್ತಿದೆ. ಆ ಮೂಲಕ ಚಿತ್ರದ ಬಗ್ಗೆ ಮತ್ತೊಂದಷ್ಟು ಕುತೂಹಲ ಕೆರಳಿಸಲು ಜೂಲಿಯಟ್ ತಂಡ ರೆಡಿಯಾಗಿದೆ. ವಿರಾಟ್ ಬಿ.ಗೌಡ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರವನ್ನು ಪಿಎಲ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಲಿಖಿತ್ ಆರ್. ಕೊಟ್ಯಾನ್ ಅವರು ನಿರ್ಮಾಣ ಮಾಡಿದ್ದಾರೆ.
ಮಹಿಳಾಪ್ರದಾನ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಪ್ರೇಮಂಪೂಜ್ಯಂ ಖ್ಯಾತಿಯ ಬೃಂದಾ ಆಚಾರ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಒಬ್ಬ ಹೆಣ್ಣಿಗೆ ತನ್ನ ಜೀವನದಲ್ಲಿ ಎಲ್ಲ ದಾರಿಗಳು ಮುಚ್ಚಿ ಹೋದಾಗ, ಆಕೆ ತನ್ನತನವನ್ನು ಹೇಗೆ ರಕ್ಷಿಸಿಕೊಳ್ಳುತ್ತಾಳೆ ಎಂಬುದನ್ನು ಈ ಚಿತ್ರದ ಮೂಲಕ ನಿರ್ದೇಶಕ ವಿರಾಟ್ ಬಿ.ಗೌಡ ಅವರು ಹೇಳಹೊರಟಿದ್ದಾರೆ. ಇದೊಂದು ಮರ್ಡರ್ ಮಿಸ್ಟರಿ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದ್ದು, ಮಂಗಳೂರು ಬೆಳ್ತಂಗಡಿ ಸುತ್ತಮುತ್ತ ಸುಮಾರು ೪೮ ದಿನಗಳವರೆಗೆ ಚಿತ್ರೀಕರಣ ನಡೆಸಲಾಗಿದೆ. ವಿಶೇಷವಾಗಿ ಈ ಚಿತ್ರದ ಶೇ.೭೦ ರಷ್ಟು ಭಾಗದ ಕಥೆ ಕಾಡಿನ ಕತ್ತಲಲ್ಲೇ ನಡೆಯುತ್ತದೆ. ಇನ್ನು ಈ ಚಿತ್ರದಲ್ಲಿ ಒಂದು ಮೋಟಿವೇಶನ್ ಸಾಂಗ್, ತಂದೆ ಮಗಳ ಬಾಂಧವ್ಯದ ಹಾಡು, ರ‍್ಯಾಪ್ ಸಾಂಗ್ ಹಾಗೂ ಇಂಗ್ಲೀಷ್ ಭಾಷೆಯ ಹಾಡು ಸೇರಿ ಒಟ್ಟು ೪ ಹಾಡುಗಳಿದ್ದು, ರಜತ್ ಹಾಗೂ ಸಂದೀಪ್ ಬಲ್ಲಾಳ ಅವರುಗಳು ಮ್ಯೂಸಿಕ್ ಕಂಪೋಜ್ ಮಾಡಿದ್ದಾರೆ. ಈಗಾಗಲೇ ತಂದೆ ಮಗಳ ಬಾಂಧವ್ಯದ ಕಥೆಯನ್ನು ಹೇಳುವ “ನೆನಪೆಲ್ಲಿ ಈಗ ಅವಳಿರದ ಜಾಗ” ಎಂಬ ಸುಖೀರ್ತ್ ಶೆಟ್ಟಿ ಸಾಹಿತ್ಯ ಹಾಗೂ ಮಲ್ಲಿಕಾಮಟ್ಟಿ ಅವರ ಕಂಠದಲ್ಲಿ ಮೂಡಿಬಂದಿರುವ ಹಾಡನ್ನು ಹತ್ತು ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಚಿತ್ರದ ಟ್ರೆöÊಲರ್ ಕೂಡ ಅತಿಹೆಚ್ಚು ವೀಕ್ಷಣೆಯಾಗುವ ಮೂಲಕ ಟ್ರೆಂಡಿಂಗ್‌ನಲ್ಲಿದೆ. ರವಿ ಬಸ್ರೂರು ಸಹೋದರ ಸಚಿನ್ ಬಸ್ರೂರು ಅವರ ಹಿನ್ನೆಲೆಸಂಗೀತ ಹಾಗೂ ಶೆಂಟೋ ವಿ. ಅಂಟೋ ಅವರ ಕ್ಯಾಮೆರಾವರ್ಕ್ ಈ ಚಿತ್ರಕ್ಕಿದೆ. ಅನೂಪ್‌ಸಾಗರ್, ಶ್ರೀಕಾಂತ್, ರಾಯ್ ಬಡಿಗೇರ್, ಖುಷಿ ಆಚಾರ್ಯ, ರವಿ(ಗಟ್ಟಿಮೇಳ) ಮುಂತಾದವರು ಈ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.