ಚೆನ್ನೈ ನಲ್ಲಿ ಅರ್ಜುನ್ ಸರ್ಜಾರಿಂದ ಆಂಜನೇಯನ ಭವ್ಯ ದೇಗುಲ ನಿರ್ಮಾಣ
Posted date: 06 Tue, Jul 2021 11:06:17 AM
ನಟ ಅರ್ಜುನ್ ಸರ್ಜಾ ಬಾಲ್ಯದಿಂದಲೂ ಆಂಜನೇಯನ ಭಕ್ತರು. 
ಹನುಮಂತನನ್ನು ಅಪಾರವಾಗಿ ನಂಬಿರುವ ಅರ್ಜುನ್ ಸರ್ಜಾ ಅವರು ಎಷ್ಟು ಎತ್ತರಕ್ಕೆ ಬೆಳೆದರೂ ಅನ್ನುವುದು ಎಲ್ಲರಿಗೂ ತಿಳದೇ ಇದೆ.
ಅರ್ಜುನ್ ಸರ್ಜಾ ಅವರು ತಮ್ಮ ಆರಾಧ್ಯದೈವ ಆಂಜನೇಯನಿಗಾಗಿ ಚೆನ್ನೈನಲ್ಲಿ ಭವ್ಯ ದೇಗುಲ ನಿರ್ಮಿಸಿದ್ದಾರೆ. 
ಪ್ರಾಣದೇವರ ಸುಂದರಮೂರುತಿಯನ್ನು  ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಪ್ರತಿಷ್ಢಾಪಿಸಿದರು.
ಹದಿನಾರು ವರ್ಚಗಳ ಹಿಂದೆ ವಿಶ್ವಸಂತ ಪೇಜಾವರ ಮಠದ ಹಿರಿಯ ಶ್ರೀಗಳಾಗಿದ್ದ, ಶ್ರೀ ವಿಶ್ವೇಶ ತೀರ್ಥರು ಈ ದೇವಸ್ಥಾನದ ಭೂಮಿಪೂಜೆ ನೆರವೇರಿಸಿದ್ದರು.
ಶ್ರೀ ವಿನಯ್ ಗುರೂಜಿ ಅವರು ಈ ಪ್ರತಿಷ್ಠಾ ಮಹೋತ್ಸವಕ್ಕೆ ಆಗಮಿಸಿ ಆಶೀರ್ವದಿಸಿದರು. 
ಕೋವಿಡ್ ನಿಯಮ ಪಾಲನೆ ಇರುವುದರಿಂದ ಅರ್ಜುನ್ ಸರ್ಜಾ ಕುಟುಂಬದವರು ಮತ್ತು ಕೆಲವೇ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed