ಸಿಕ್ಕೇ ಬಿಡ್ತು ರಾಣಾ ಮುಂದಿನ ಸಿನಿಮಾ ಅಪ್ಡೇಟ್-ಪ್ರೇಮ್ ಶಿಷ್ಯ ವಿಜಯ್ ಈಶ್ವರ್ ಹೇಳ್ತಾರೆ ಆಕ್ಷನ್ ಕಟ್
Posted date: 26 Mon, Sep 2022 08:44:12 AM
`ಏಕ್ ಲವ್ ಯಾ`ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಗ್ರ್ಯಾಂಡ್  ಎಂಟ್ರಿ ಕೊಟ್ಟ ನಟಿ ರಕ್ಷಿತಾ ಸಹೋದರ ರಾಣಾ ಮೊದಲ ಸಿನಿಮಾದಲ್ಲೇ ಭರವಸೆ ಹುಟ್ಟು ಹಾಕಿದ್ದು ಗೊತ್ತೇ ಇದೆ. ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದ ಲವ್ ಕಹಾನಿಗೆ ಪ್ರೇಕ್ಷಕರು ಮೆಚ್ಚುಗೆ ಮುದ್ರೆ ಜೊತೆಗೆ ರಾಣಾ ನಟನೆಯನ್ನು ಮೆಚ್ಚಿ ಕೊಂಡಾಡಿದ್ರು. ನಿರ್ದೇಶಕ ಪ್ರೇಮ್ ಕುಲುಮೆಯಲ್ಲಿ ಪಳಗಿರೋ ರಾಣಾ ಚಂದನವನಕ್ಕೆ ಭರವಸೆಯ ನಟನಾಗೋ ಸಕಲ ಲಕ್ಷಣಗಳನ್ನು ಹೊಂದಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. 

ಅನುಭವಿ ಕಲಾವಿದನಂತೆ ಮೊದಲ ಸಿನಿಮಾದಲ್ಲೇ ಮಿಂಚಿ ಚಿತ್ರರಸಿಕರಮನಗೆದ್ದ ರಾಣಾ ಈಗೇನು ಮಾಡ್ತಿದ್ದಾರೆ.? ಮುಂದಿನ ಸಿನಿಮಾ ಯಾವ್ದು..? ಯಾರ ನಿರ್ದೇಶನದಲ್ಲಿ ರಾಣಾ ಮುಂದಿನ ಸಿನಿಮಾ ಮೂಡಿಬರಲಿದೆ ಎಂಬೆಲ್ಲ ಪ್ರಶ್ನೆಗಳು ಮೂಡೋದು ಸಹಜ ಅದಕ್ಕೀಗ ಉತ್ತರ ಸಿಕ್ಕಿದೆ. ಹೌದು, ರಾಣಾ ಮುಂದಿನ ಸಿನಿಮಾ ನಿರ್ದೇಶನ ಮಾಡ್ತಿರೋದು ಯುವ ನಿರ್ದೇಶಕ. ಅದು ಬೇರೆ ಯಾರೂ ಅಲ್ಲ ಪ್ರೇಮ್ ನೆಚ್ಚಿನ ಶಿಷ್ಯ. ನಿರ್ದೇಶಕ ಪ್ರೇಮ್ ಜೊತೆಗೆ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ಇರುವ ವಿಜಯ್ ಈಶ್ವರ್ ಸ್ವತಂತ್ರ ನಿರ್ದೇಶಕನಾಗಿ ಬಡ್ತಿ ಪಡೆಯಲು ಸಜ್ಜಾಗಿದ್ದು ಮೊದಲ ಸಿನಿಮಾವನ್ನು ರಾಣಾಗೆ ಡೈರೆಕ್ಟ್ ಮಾಡುತ್ತಿದ್ದಾರೆ. 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed