ನಾಲ್ಕು ಹೃದಯಗಳ ಮಿಡಿತ ಚೌಕಾಬಾರಾ - 3/5 ***
Posted date: 12 Sun, Mar 2023 04:00:17 PM

ಯುವ ಹೃದಯಗಳ ನಡುವೆ ನಡೆಯುವ ಪ್ರೀತಿ ಪ್ರೇಮದ ತುಮುಲಗಳ ಕಥಾಹಂದರವನ್ನು ಒಂದಷ್ಟು ರೋಚಕ ದೃಶ್ಯಗಳೊಂದಿಗೆ  ತೋರಿಸುವ  ಪ್ರಯತ್ನವೇ  ಚೌಕಾಬಾರಾ. ವಿಶೇಷ ಎಂದರೆ  ಈ ಚಿತ್ರಕ್ಕೆ  ಪತಿ ವಿಕ್ರಮ್ ಸೂರಿ ಆಕ್ಷನ್ ಕಟ್ ಹೇಳಿದ್ದು, ಪತ್ನಿ ನಮಿತಾರಾವ್ ನಿರ್ಮಾಪಕಿ. ಜೊತೆಗೆ ನಾಯಕಿ ಭಾವನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ಈ ಚಿತ್ರಕ್ಕೆ  ತಮ್ಮ ದಶಕಗಳ ಪರಿಶ್ರಮವನ್ನು ಇಬ್ಬರೂ  ಧಾರೆ ಎರೆದಿದ್ದಾರೆ, ನಾಯಕ, ನಾಯಕಿ ಸೇರಿ 4 ಪಾತ್ರಗಳನ್ನಿಟ್ಟುಕೊಂಡು ಪರಿಪೂರ್ಣ ಪ್ರೇಮಕಥೆಯನ್ನು ನಿರ್ದೇಶಕ ವಿಕ್ರಂ ಸೂರಿ ತೆರೆಮೇಲೆ ನಿರೂಪಿಸಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲೇ ಇಂಥ ವಿಭಿನ್ನ ಸಬ್ಜೆಕ್ಟನ್ನು  ಕೈಗೆತ್ತಿಕೊಂಡಿದ್ರೂ ಅದನ್ನು ಅಷ್ಟೇ ಪರಿಣಾಮಕಾರಿಯಾಗಿ ತಂದಿದ್ದಾರೆ. ಬಹಳ ದಿನಗಳ ನಂತರ ಕಾದಂಬರಿ ಆಧಾರಿತ ಚಿತ್ರವಾಗಿ ಚೌಕಾಬಾರಾ ಮೂಡಿಬಂದಿದೆ.   

ಪ್ರಮುಖವಾಗಿ  ನಾಲ್ಕು ಪಾತ್ರಗಳ ಸುತ್ತ ನಡೆಯುವ ಕಥಾನಕ ಇದಾಗಿದ್ದರೂ  ಯಾವ  ಪಾತ್ರವನ್ನೂ  ಹೆಚ್ಚು ಕಡಿಮೆ ಅಂತ ಮಾಡದೆ ಸಮಾನ ಅವಕಾಶ ನೀಡಿದ್ದಾರೆ. ಇಬ್ಬರು ಹುಡುಗಿಯರು, ನಾಯಕ  ಮೂವರೂ ಸ್ನೇಹಿತರು. ಇವರಲ್ಲಿ ನಾಯಕ, ನಾಯಕಿಯ  ಮನೆಯ ಮೇಲೆ ಬಾಡಿಗೆ ಪಡೆದು  ವಾಸವಾಗಿರುತ್ತಾನೆ.  

ಹೀರೋಗೆ  ಸ್ನೇಹಿತೆಯ ಮನೆಗೆ ಬರುತ್ತಿದ್ದ ಮತ್ತೊಬ್ಬ ಯುವತಿಯ ಪರಿಚಯವಾಗುತ್ತಾನೆ. ಇವರಿಬ್ಬರ  ಪರಿಚಯದ ನಂತರ ತೀರ ಹತ್ತಿರವಾಗುತ್ತಾರೆ. ಈ ನಡುವೆ ಒಬ್ಬ ನಾಯಕಿಗೆ ನಾಯಕನ ಮೇಲೆ ಪ್ರೀತಿ ಉಂಟಾಗಿ ಅದನ್ನು  ಆತನಿಗೆ ಹೇಳಬೇಕು ಎಂದುಕೊಳ್ಳುವ  ಸಮಯಕ್ಕೆ  ಆಕಸ್ಮಿಕವಾಗಿ ಪರಿಚಯವಾದ ನಾಯಕಿಯ ಜೊತೆ ನಾಯಕನ ಸಲುಗೆ ಮುಂದುವರೆದು ಇಬ್ಬರೂ ಮೈಮರೆತು ಒಂದಾಗುತ್ತಾರೆ. ನಂತರ ಇಬ್ಬರಲ್ಲೂ  ಪಶ್ಚಾತಾಪದ ಬೇಗೆ  ಕಾಡುತ್ತದೆ.  ಇದರಲ್ಲಿ ತಪ್ಪು  ಯಾರದ್ದು ? ಕಾಲದ್ದೋ ವಯಸಿನದ್ದೋ ,  ಹಾಗೆ ನೋಡಿದರೆ ವಯಸು ಹಾಗೂ ಸಂದರ್ಭ ಎರಡೂ ಇಲ್ಲಿ  ತಪ್ಪು ಮಾಡುವಂತೆ ಮಾಡಿರುತ್ತವೆ.  ಇಬ್ಬರೂ ನಾಯಕಿಯರ  ಪೋಷಕರಿಗೆ   ನಾಯಕ ತನಗೆ  ಅಳಿಯನಾಗಬೇಕು ಎಂದುಕೊಳ್ಳುತ್ತಾರೆ. ಆದರೆ, ದೇಹ ಹಂಚಿಕೊಂಡವನ ಜೊತೆಗೆ ನಾಯಕಿ ಮದುವೆಗೆ ರೆಡಿ ಇರಲ್ಲ, ಇನ್ನೊಬ್ಬಳ ಜೊತೆ ಮಲಗಿದವನ ಸಂಗಡ ಮದುವೆಯಾಗಲು ಮತ್ತೊಬ್ಬ ನಾಯಕಿಗೂ ಇಷ್ಟವಿರಲ್ಲ  ಮುಂದೆ ಏನಾಗುತ್ತದೆ  ಎನ್ನುವುದೇ ಚೌಕಾಬಾರಾ  ಚಿತ್ರದ  ಕುತೂಹಲ.  

 

ಈ ಕುತೂಹಲ ತಣಿಸಿಕೊಳ್ಳಲು ಒಮ್ಮೆ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ಚೌಕಾಬಾರಾ ಸಿನಿಮಾವನ್ನು ವೀಕ್ಷಿಸಿ. ನಮಿತಾರಾವ್ ಉತ್ತಮ ಅಭಿನಯ ನೀಡುವ ಮೂಲಕ  ಪಾತ್ರಕ್ಕೆ  ನ್ಯಾಯ ಒದಗಿಸಿದ್ದಾರೆ. ನಾಯಕ ವಿಹಾನ್ ಪ್ರಭಂಜನ್ ಕೂಡ ಪರಿಪೂರ್ಣ ಕಲಾವಿದನಾಗಿ ಅಭಿನಯ ನೀಡಿದ್ದಾರೆ. ರೂಪ ಪ್ರಭಾಕರ್ ಅವರ ಸಂಭಾಷಣೆಗಳು ವೀಕ್ಷಕರ ಮನದಲ್ಲುಳಿಯುವಂತಿವೆ. ರವಿರಾಜ್ ಅವರ ಕ್ಯಾಮೆರಾ ವರ್ಕ್ ಚಿತ್ರದ ಹೈಲೈಟ್‌ಗಳಲ್ಲೊಂದು. ಅಶ್ವಿನ್ ಪಿ.ಕುಮಾರ್ ಅವರ ಸಂಗೀತವೂ ಚಿತ್ರಕ್ಕೆ ಹೊಸ ಮೆರಗನ್ನು ತಂದುಕೊಟ್ಟಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed