ಮುಂದಿನ ತಿಂಗಳು ಪದ್ಮಾವತಿ ತೆರೆಗೆ
Posted date: 14 Tue, Jun 2022 08:41:59 AM
ರಾವ್‌ ಅಂಡ್ ರಾವ್ ಸಿನಿಮಾಸ್ ಲಾಂಛನದಲ್ಲಿ ದಾಮೋದರ್‌ ಪಾರಗೆ ಮತ್ತು  ನಾಮದೇವ ಭಟ್ಟರ್ ಸೇರಿ ನಿರ್ಮಿಸಿರುವ `ಪದ್ಮಾವತಿ` ಚಿತ್ರ ಇದೀಗ ಬಿಡುಗಡೆಗೆ ಸಿದ್ದವಾಗಿದೆ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು ಸರ್ಟಿಫಿಕೇಟ್ ಸಿಕ್ಕಿದೆ. ವಿಕ್ರಮ್ ಆರ್ಯ ಹಾಗೂ ದಾಮೋದರ್ 
ಪಾರಗೆ ಈ ಚಿತ್ರದ ಇಬ್ಬರು ನಾಯಕರಾಗಿ ಅಭಿನಯಿದ್ದಾರೆ. ಪದ್ಮಾವತಿ 
ಚಿತ್ರದಲ್ಲಿ ಹೆಣ್ಣಿನ ಮನದ ಭಾವನೆಗಳನ್ನು ಆಕೆಯ ತಪ್ಪು, 
ಒಪ್ಪುಗಳನ್ನು ಹೇಳುವಂತಹ ವಿಶಿಷ್ಠವಾದ   ಕಥಾಹಂದರವಿದ್ದು, 
ಇದರ ಜೊತೆಗೆ ಒಂದು ಪಕ್ಕಾ ಲವ್ ಸ್ಟೋರಿಯನ್ನೂ ಕೂಡ ಈ ಚಿತ್ರ 
ಒಳಗೊಂಡಿದೆ. ಜೊತೆಗೆ ಇದೊಂದು ಮಹಿಳಾಪ್ರಧಾನ ಚಿತ್ರವೂ 
ಆಗಿದೆ. ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರವನ್ನು ಜುಲೈ 
ತಿಂಗಳಲ್ಲಿ ರಾಜ್ಯಾದ್ಯಂತ ರಿಲೀಸ್  ಮಾಡುವುದಾಗಿ ನಿರ್ಮಾಪಕ ವಿಕ್ರಮ್ 
ಆರ್ಯ ಅವರು ತಿಳಿಸಿದ್ದಾರೆ. 
 
ಮಿಥುನ್ ಚಂದ್ರಶೇಖರ್ ಅವರ ಕಥೆ ಚಿತ್ರಕಥೆ ಹಾಗೂ  ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ಶೋಯಬ್ ಅಹಮ್ಮದ್ ಅವರ ಛಾಯಾಗ್ರಹಣವಿದೆ. ಚಿತ್ರದ ೮ ಹಾಡುಗಳಿಗ ದಿನೇಶ್‌ಕುಮಾರ್ ಅವರ ಸಂಗೀತ ಸಂಯೋಜನೆಯಿದೆ. ಈಶ್ವರ್ ಅವರ ಸಂಕಲನ, ಥ್ರಿಲ್ಲರ್ ಮಂಜು ಅವರ ಸಾಹಸ, ತ್ರಿಭುವನ್ ಅವರ ನೃತ್ಯನಿರ್ದೇಶನ, ಪ್ರೇಮ್‌ಸಾಯಿ ಅವರ ಸಾಹಿತ್ಯ, ಲತ ಎಸ್. ಅವರ 
ಕಥೆ, ಚಿತ್ರಕತೆ ಈ ಚಿತ್ರಕ್ಕಿದೆ. ವಿಕ್ರಮ್ ಆರ್ಯ, ಸಾಕ್ಷಿ ಮೇಘನಾ, ದಾಮೋದರ್ ಪಾರಗೆ, ರಾಘವ ಕಲಾಲ್, ನಭಿರಸುಲ್, ಸುರೇಶ್, 
ಸ್ವಾಮಿಗೌಡ, ಅಭಿಲಾಷ್, ಶರಣ್ ಗಿನ್‌ಕೇರಿ, ಶಿವಮೊಗ್ಗ ರಾಮಣ್ಣ, ಕೀರ್ತಿ ಸಿ.ಎನ್, ರಾಜೇಶ್ವರಿ ಪಾಂಡೆ, ಅರ್ಚನಾ ಶೆಟ್ಟಿ ಇನ್ನು ಮುಂತಾದವರ  ತಾರಾಬಳಗ ಈ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed