ಆಕ್ಷನ್ ಥ್ರಿಲ್ಲರ್ ``ಆಲ್ಫಾ`` ಚಿತ್ರದ ಚಿತ್ರೀಕರಣ ಮುಕ್ತಾಯ
Posted date: 03 Wed, Aug 2022 09:04:43 AM
ಶ್ರೀ ಧರ್ಮಶಾಸ್ತ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ``ಆಲ್ಫಾ``ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬೆಂಗಳೂರು, ಹಾಸನ, ಸಕಲೇಶಪುರ, ಕುಂದಾಪುರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಚಿತ್ರದ ಮೊದಲ ಪ್ರತಿ ಸಿದ್ದವಾಗಲಿದೆ. ಸೆಪ್ಟೆಂಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ.

ಚಿರಂತ ಎಂಬ ನೂತನ ಪ್ರತಿಭೆ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಮೂಲತಃ ಬಾಕ್ಸರ್ ಆಗಿರುವ ಚಿರಂತ ಅವರಿಗೆ "ಆಲ್ಫಾ" ಚೊಚ್ಚಲ ಚಿತ್ರ. ನಾಯಕನಾಗಿ ಕಾಣಿಸಿಕೊಂಡಿರುವ ಚಿರಂತ ಈ ಚಿತ್ರದ ನಿರ್ದೇಶಕರೂ ಹೌದು. ಕಥೆ, ಚಿತ್ರಕಥೆ ಕೂಡ ಚಿರಂತ ಅವರದೆ. ಸಿಂಧೂಜ ಈ ಚಿತ್ರದ ನಾಯಕಿ. ಜಗದೀಶ್ ಹಾಗೂ ರವಿಚಂದ್ರ ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

``ಆಲ್ಫಾ``ಎಂದರೆ ಗ್ರೀಕ್ ಭಾಷೆಯಲ್ಲಿ ನಂಬರ್ ಒನ್ ಅಂತ. ALPHA ಮತ್ತು BETA ತೆಗೆದು English ನಲ್ಲಿ alphabets ಅಂತ ಕರೆಯುತ್ತಾರೆ ಎಂದು ನಾಯಕ ಹಾಗೂ ನಿರ್ದೇಶಕ ಚಿರಂತ ಶೀರ್ಷಿಕೆಯ ಅರ್ಥ ತಿಳಿಸಿದ್ದಾರೆ.

ಅಜ್ಮಲ್ ಖಾನ್ ಛಾಯಾಗ್ರಹಣ, ವಿನ್ಸನ್ ಅಭಿಷೇಕ್ ಸಂಗೀತ ನಿರ್ದೇಶನ, ಸುಜೇಂದ್ರ ಎನ್ ಮೂರ್ತಿ ಸಂಕಲನ ಹಾಗೂ ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed