ಸುಬ್ಬು ಕನ್ನಡಕ್ಕೆ ಮತ್ತೊಬ್ಬ ಖಳನಟ
Posted date: 29 Wed, Mar 2023 07:01:39 AM
ಮಂಜುಕವಿ ಅವರ  ನಿರ್ದೇಶನದ ಸ್ಟೇಟಸ್ ಚಿತ್ರದಲ್ಲಿ ನಟ ಸುಬ್ಬು ಅವರು ಸೋಷಿಯಲ್ ವರ್ಕರ್  ಡಾ.ಸುಬ್ಬು ಹೆಸರಿನ ಪಾತ್ರವನ್ನೇ ನಿರ್ವಹಿಸಿ ಗುರುತಿಸಿಕೊಂಡಿದ್ದರು.‌ ಆನಂತರ  ಮಿಸ್ ಗೈಡ್ ಎನ್ನುವ ಚಿತ್ರದ ಮೂಲಕ ಖಳನಾಯಕನಾಗಿ ಗುರುತಿಸಿಕೊಂಡರು.‌ ಮೂಲತಃ ಬಿಲ್ಡರ್ ಆದ ಸುಬ್ಬರಾವ್  ಚಿತ್ರರಂಗದಲ್ಲಿ ಸುಬ್ಬು ಎಂದೇ ಪರಿಚಿತ. 

ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಕಥಾಹಂದರ ಹೊಂದಿರುವ ಪ್ರೇಮಿಗಳ ಗಮನಕ್ಕೆ ಎನ್ನುವ ಚಿತ್ರವನ್ನು ನಿರ್ಮಿಸಿ ಈಗ  ನಿರ್ಮಾಪಕನೂ ಆಗಿರುವ  ಸುಬ್ಬು ಇದೇ ಚಿತ್ರದಲ್ಲಿ ಖಳನಟನಾಗಿಯೂ ನಟಿಸಿದ್ದಾರೆ.‌ 

ಒಮ್ಮೆ  ರಾಘವ ಅವರು ಇವರನ್ನು ನೋಡಿ ನೀನು ಖಳನಟನ ಹಾಗೆ ಕಾಣುತ್ತೀಯ ಎಂದು ಹೇಳಿದ್ದರಂತೆ.  ಅವರ ಮಾತನ್ನೇ ವೇದವಾಕ್ಯದಂತೆ ತೆಗೆದುಕೊಂಡ ಸುಬ್ಬು ರಾಘವ ಅವರ ಬಳಿಯೇ ಅಭಿನಯದ ಪಾಠ ಕಲಿತರಂತೆ. ಮುಂದೆ  ಅವರು ಚಿತ್ರರಂಗದಲ್ಲಿ ಪೋಲೀಸ್ ಅಧಿಕಾರಿ ಅಥವಾ ‍ ಖಳನಟನಾಗಿ ಮುಂದುವರಿಯಬೇಕೆಂಬ ‌ಮಹದಾಸೆಯನ್ನೂ ಹೊಂದಿದ್ದಾರೆ. ವಿಶಿಷ್ಟ ವ್ಯಕ್ತಿತ್ವದ ನಟ ಪ್ರಕಾಶ್ ರೈ ಅವರಂತೆ‌ ಚಿತ್ರರಂಗದಲ್ಲಿ ನಾನು ಗುರುತಿಸಿಕೊಳ್ಳಬೇಕು, ಉತ್ತಮ‌ ಖಳನಾಯಕ ಎಂದು ಇಂಡಸ್ಡ್ರಿಯಲ್ಲಿ ಹೆಸರು ಮಾಡಬೇಕು ಎಂದುವರು ಹೇಳುತ್ತಾರೆ. ಅಲ್ಲದೆ ಸಿಟಾಡಿಲ್ ಫಿಲಂಸ್ ಮೂಲಕ ಸುಬ್ಬು ಅವರು  ನಿರ್ಮಾಣ ಮಾಡಿರುವ ಪ್ರೇಮಿಗಳ ಗಮನಕ್ಕೆ ಚಿತ್ರ ಜುಲೈನಲ್ಲಿ  ತೆರೆಕಾಣಲಿದೆ. ಇದರಲ್ಲಿ  ಬಿಗ್ ಬಾಸ್  ಶಶಿ, ಚಿರಶ್ರೀ ಅಂಚನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed