ಪುನೀತ್ ರಾಜಕುಮಾರ್ ಪುಣ್ಯಸ್ಮರಣೆಗೆ ಜಂಕಾರ್ ಮ್ಯೂಸಿಕ್ ನಿಂದ``ಮತ್ತೊಮ್ಮೆ ಬಾ ಮಗುವಾಗಿ ಬಾ``ಹಾಡು ಬಿಡುಗಡೆ
Posted date: 25 Tue, Oct 2022 12:17:10 PM
ಜನಪದ, ಸಿನಿಮಾ‌ ಸೇರಿದಂತೆ ಸಾಕಷ್ಟು ಶೈಲಿಯ ಹಾಡುಗಳನ್ನು ಹಲವಾರು ವರ್ಷಗಳಿಂದ ಸಂಗೀತಪ್ರಿಯರಿಗೆ ನೀಡುತ್ತಾ ಬಂದಿರುವ ಖ್ಯಾತ ಜಂಕಾರ್ ಮ್ಯೂಸಿಕ್ ಸಂಸ್ಥೆ ಪುನೀತ್ ರಾಜಕುಮಾರ್ ಪ್ರಥಮ ಪುಣ್ಯಸ್ಮರಣೆಯ ನೆನಪಿಗಾಗಿ "ಮತ್ತೊಮ್ಮೆ ಬಾ ಮಗುವಾಗಿ ಬಾ" ಎಂಬ ಹಾಡನ್ನು ಬಿಡುಗಡೆ ಮಾಡಿದೆ.
 
ಪುನೀತ್ ಎಸ್ ಎಸ್ ಬರೆದಿರುವ ಈ ಹಾಡನ್ನು ಅರ್ಫಜ್ ಉಲ್ಲಾಳ್ ಸುಮಧುರವಾಗಿ ಹಾಡಿದ್ದಾರೆ. ಅವರೆ ಸಂಗೀತವನ್ನು ನೀಡಿದ್ದಾರೆ. 
ನಗುವಿನ ರಾಜ ಕನ್ನಡದ ತೇಜ ಡಾ|| ಪುನೀತ್ ರಾಜ್‍ಕುಮಾರ್ ಅವರ ಸ್ಮರಣೆಗಾಗಿ ಎಂಬ ವಾಕ್ಯದೊಂದಿಗೆ ಈ ಹಾಡು ಬಿಡುಗಡೆಯಾಗಿದೆ. 
 
ಅಭಿಮಾನಿಗಳ ಆರಾಧ್ಯದೈವ ಪುನೀತ್ ರಾಜ್‍ಕುಮಾರ್ ಅವರ ಮೇಲಿರುವ ಅಪಾರ ಅಭಿಮಾನ ಈ ಹಾಡಿನಲ್ಲಿ ಎದ್ದು ಕಾಣುತ್ತಿದೆ. ಬಿಡುಗಡೆಯಾದ ಕ್ಷಣದಿಂದಲೇ ಈ ಹಾಡಿಗೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed