ದುಬೈಗೆ ಹೊರಟುನಿಂತ ಸುಕನ್ಯದ್ವೀಪ
Posted date: 15 Mon, Nov 2021 07:53:01 PM

ಪಕ್ಕಾ ಫ್ಯಾಮಿಲಿ ಕಮ್ ಲವ್ ಕಾಮಿಡಿ ಎಂಟರ್ಟೈನರ್ ಕಥಾಹಂದರ ಹೊಂದಿರುವ  ಸುಕನ್ಯ ದ್ವೀಪ. ಈಗಾಗಲೇ  ಚಿತ್ರದ ಮೊದಲನೇ ಹಂತದ ಚಿತ್ರೀಕರಣ ಮುಗಿದಿದ್ದು ಕಳಸ, ಚಿಕ್ಕಮಗಳೂರು,ದೇವರಮನೆ ಹಾಗೂ ಮೂಡಿಗೆರೆ, ಸುತ್ತಮುತ್ತ  ಎರಡನೇ ಹಂತದ ಚಿತ್ರೀಕರಣ ನಡೆಸಲಾಗುವುದು.  ಉಳಿದಂತೆ ೨ ಹಾಡುಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ ಮುಂದಿನವಾರ ದುಬೈಗೆ ಪ್ರಯಾಣ ಬೆಳೆಸಲಿದೆ. ನಾಯಕ ರಾಜ್ ಪ್ರಭು, ಶ್ರೇಯಾವಸಂತ್ ಹಾಗೂ ಡ್ಯಾನ್ಸ್ ಮಾಸ್ಟರ್ ಜಗ್ಗು ತೆರಳಲಿದ್ದಾರೆ. ಉಳಿದೆರಡು ಹಾಡುಗಳನ್ನು ಶಿಮ್ಲಾದಲ್ಲಿ ಶೂಟ್ ಮಾಡೋ ಪ್ಲಾನ್ ಇದೆ.ನಿರ್ಮಾಣದ ಜವಾಬ್ದಾರಿಯನ್ನು ರಾಜ್ ಪ್ರಭು   ವಹಿಸಿಕೊಂಡಿದ್ದಾರೆ      ಮೂವರು  ಅಕ್ಕ-ತಂಗಿಯರ ಸುತ್ತ ನಡೆಯುವ ಕಥೆ ಹೇಳಹೊರಟಿದ್ದಾರೆ,  ನಾಯಕನ ಪಾತ್ರದಲ್ಲಿ ರಾಜ್‌ಪ್ರಭು ಕಾಣಿಸಿಕೊಂಡಿದ್ದಾರೆ. ಫ್ಯಾಮಿಲಿ, ಲವ್‌ಸ್ಟೋರಿ ಇರೋ ಈ ಚಿತ್ರದಲ್ಲಿ ಕಾಮಿಡಿಗೆ ಹೆಚ್ಚು ಒತ್ತು ನೀಡಲಾಗಿದೆ,  ಸುಕನ್ಯ ಎಂದರೆ ಹೆಣ್ಣು, ದ್ವೀಪ ಎಂದರೆ  ಅವರಿರುವ ಮನೆಗೆ ಹೋಲಿಸಲಾಗಿದೆ.


ವೀರಬಾಹು ಈ  ಚಿತ್ರದ ನಿರ್ಮಾಪಕರು. ಈ ಚಿತ್ರಕ್ಕೆ ಸಂಗೀತ ನಿರ್ದೇಶಕನಾಗಿ  ಕೌಶಿಕ್ ಹರ್ಷ  ಕೆಲಸಮಾಡಿದ್ದು. ೫ ಹಾಡುಗಳನ್ನು ಕಂಪೋಜ್ ಮಾಡಿದ್ದಾರೆ. ವಿಘ್ನೇಶ್ ನಾಗೇಂದ್ರ  ಚಿತ್ರದ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ರಾಜ್ ಪ್ರಭು, ಸಚಿನ್ ಪುರೋಹಿತ್,ರಘು ರಂಜನ್,ನಾಯಕರು. ಶ್ರೇಯ ವಸಂತ್, ಅಕ್ಷಿತ ನಾಗರಾಜ್, ಚುಂಬಿತ ನಾಯಕಿಯರು. ಹಿರಿಯನಟ ಎಂಡಿ ಕೌಶಿಕ  ಕುಟುಂಬದ ಹಿರಿಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
 
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed