ಸ್ಟಾರ್ ಸುವರ್ಣದಲ್ಲಿ ಸಿಹಿಕಹಿ ಚಂದ್ರು ಸಾರಥ್ಯದ ``ಬೊಂಬಾಟ್ ಭೋಜನ ಸೀಸನ್ 3``.ಆರಂಭ
Posted date: 23 Mon, Jan 2023 08:24:45 AM
ನಟನಾಗಿ ಜನಮನಸೂರೆಗೊಂಡಿರುವ ಸಿಹಿಕಹಿ ಚಂದ್ರು, "ಬೊಂಬಾಟ್ ಭೋಜನ" ದ ಮೂಲಕ ರಚಿಕರ ಅಡುಗೆ ಮಾಡಿ ಎಲ್ಲರ ಮನವನ್ನು ಗೆದ್ದಿದ್ದಾರೆ. ಪ್ರಸ್ತುತ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಎರಡು ಸೀಸನ್ ಪೂರ್ಣಗೊಳಿಸಿರುವ "ಬೊಂಬಾಟ್ ಭೋಜನ" ಕಾರ್ಯಕ್ರಮದ ಮೂರನೇ ಸೀಸನ್ ಈಗ ಆರಂಭವಾಗಿದೆ. ಈ ಬಗ್ಗೆ ಮಾಹಿತಿ ನೀಡಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿಹಿಕಹಿ ಚಂದ್ರು ಸೇರಿದಂತೆ ಅನೇಕರು ಕಾರ್ಯಕ್ರಮದ ಬಗ್ಗೆ ಮಾತನಾಡಿದರು.

ಸ್ಟಾರ್ ಸುವರ್ಣ ವಾಹಿನಿಯಲ್ಲಿ 2019 ರಲ್ಲಿ ಮೊದಲ ಸೀಸನ್ ಶುರು ಮಾಡಿದ್ದೆ. ಈಗ ಎರಡನೇ ಸೀಸನ್ ಕೂಡ ಮುಕ್ತಾಯವಾಗಿ, ಮೂರನೇ ಸೀಸನ್ ಆರಂಭವಾಗಿದೆ. ಈ ಸೀಸನ್ ನಲ್ಲಿ "ಬಯಲೂಟ",
 "ಸವಿಯೂಟ", " ಮನೆಊಟ", "ಅಂದ ಚಂದ", " ಅಂಗೈ ಅಲ್ಲಿ ಆರೋಗ್ಯ" , "ಟಿಪ್ ಟಿಪ್ ಟಿಪ್" ಹಾಗೂ "ಅತಿಥಿ ದೇವೋಭವ" ಎಂಬ ಏಳು ಬಗೆಯ ವಿಶೇಷತೆಗಳಿದೆ. ಅದಕ್ಕೆ ಸಂಬಂಧಿಸಿದಂತೆ ಪರಿಣಿತರು ಮಾಹಿತಿ ನೀಡುತ್ತಾರೆ. ಇನ್ನೂ ವಿಶೇಷವೆಂದರೆ ಆರೋಗ್ಯದ ಕುರಿತು ಮನೆಮದ್ದುಗಳನ್ನು ಡಾ||ಗೌರಿ ಸುಬ್ರಹ್ಮಣ್ಯ ತಿಳಿಸುತ್ತಾರೆ. ಕಾರ್ಯಕ್ರಮದ ಕೊನೆಯಲ್ಲಿ ದುಂಡಿರಾಜ್ ಅವರ ಹನಿಗವನ ಒಂದನ್ನು ಹೇಳುತ್ತೇನೆ. ಸೋಮವಾರದಿಂದ ಶನಿವಾರದ ತನಕ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮಧ್ಯಾಹ್ನ 12ಗಂಟೆಗೆ "ಬೊಂಬಾಟ್ ಭೋಜನ ಸೀಸನ್ 3" ಪ್ರಸಾರವಾಗಲಿದೆ ಎಂದು ಕಾರ್ಯಕ್ರಮದ ಕುರಿತು ಸಂಪೂರ್ಣ ಮಾಹಿತಿಯನ್ನು ಸಿಹಿಕಹಿ ಚಂದ್ರು ನೀಡಿದರು.

ಆರೋಗ್ಯಕ್ಕೆ ಸಂಬಂಧಿಸಿದ ಚಿಕ್ಕಚಿಕ್ಕ ವಿಷಯಗಳಿಗೆ ಆಸ್ಪತ್ರೆಗೆ ಹೋಗಬೇಡಿ. ಅದಕ್ಕೆ ಮನೆಯಲ್ಲೇ ಅನೇಕ ಮದ್ದುಗಳಿದೆ ಎಂದು ಡಾ|| ಗೌರಿ ಸುಬ್ರಹ್ಮಣ್ಯ ಹೇಳಿದರು.

 ಸಾಹಿತಿ ದುಂಡಿರಾಜ್, ಸಿಹಕಹಿ ಗೀತಾ, ಖುಷಿ, ಶ್ರೀಪಾದ, ಪರಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed