ರೇಮೊಗೆ ಕುಂಬಳಕಾಯಿ, ಡಿಸೆಂಬರ್ ಗೆ ರಿಲೀಸ್
Posted date: 18 Thu, Nov 2021 10:50:49 AM
ಬಿಗ್ ಬಜೆಟ್ ಚಿತ್ರಗಳ‌ ಸರದಾರ ಸಿ.ಆರ್ ಮನೋಹರ್ ನಿರ್ಮಾಣದಲ್ಲಿ, ಜೈಆದಿತ್ಯ ಫಿಲಂಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣ ಮಾಡಿರೋ ರೇಮೊ‌ ಚಿತ್ರವನ್ನ ಪವನ್ ಒಡೆಯರ್ ನಿರ್ದೇಶಿಸಿದ್ದು, ಇಶಾನ್ ,ಅಶಿಕಾ ರಂಗನಾಥ್, ಶರತ್ ಕುಮಾರ್,‌ಮಧುಬಾಲ, ರಾಜೇಶ್ ನಟರಂಗ, ಅಚ್ಯುತ್ ಕುಮಾರ್  ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಅರ್ಜುನ್ ಜನ್ಯ ಸಂಗೀತ, ವೈದಿ ಛಾಯಾಗ್ರಣವಿರೋ ಈ ಚಿತ್ರದ ಫಸ್ಟ್ ಲುಕ್ ಟೀಸರ್ ಸದ್ಯದಲ್ಲೇ ರಿಲೀಸ್ ಆಗಲಿದ್ದು, ಚಿತ್ರತಂಡ ಫೈನಲ್ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನ ಶುರು ಮಾಡ್ತಿದೆ. 
ಸಾಕಷ್ಟು ವಿಶೇಷ ವಿಚಾರಗಳಿಂದ ಕೂಡಿರೋ ರೇಮೊನ ಇದೇ ಡಿಸೆಂಬರ್ ನಲ್ಲೇ ಪ್ರೇಕ್ಷಕರೆದುರಿಗೆ ತರೋ ಸನ್ನಾಹದಲ್ಲಿದೆ ಚಿತ್ರತಂಡ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed