ಮುಹೂರ್ತ ಒಂದು ಸಿನಿಮಾ ಎರಡು
Posted date: 12 Tue, Jul 2022 07:57:50 PM
ಚಂದನವನಕ್ಕೆ ಹೊಸಬರ ತಂಡವೊಂದು ಒಟ್ಟಿಗೆ ಎರಡು ಸಿನಿಮಾಗಳ ಮುಹೂರ್ತವನ್ನು ಆಚರಿಸಿಕೊಂಡಿದೆ. ಮೊದಲನೆಯದಾಗಿ ಬಾಲಿ ಚಿತ್ರದ ಕ್ರೀಡೆ ಕುರಿತ ಕಥೆಯಲ್ಲಿ ಹದಿಹರೆಯದ ಹಳ್ಳಿಯ ಬಡ ಕುಟುಂಬದ ಹುಡುಗಿಯೊಬ್ಬಳು ಓಟಗಾರ್ತಿಯಾಗಿ ಗುರಿ ಸಾಧಿಸಲು ಹೋಗುತ್ತಾಳೆ. ಅವಳ ಹಾದಿಯಲ್ಲಿ ಸಪಲ ಆಗುತ್ತಾಳಾ ಎನ್ನುವುದು ಒಂದು ಏಳೆಯ ಸಾರಾಂಶವಾಗಿದೆ. ಜೊತೆಗೆ ಶಾಲೆಯ ಅಂಶಗಳು ಇರಲಿದೆ. ಕುಮಾರಿ ಹರಿಣಿಜಯರಾಜ್ ಮೂಲತ: ಅಥ್ಲೇಟ್ ಆಗಿದ್ದು, ಅದಕ್ಕೆ ತಕ್ಕಂತೆ ಪಾತ್ತ ಸಿಕ್ಕಿರುವುದರಿಂದ ಸಹಜವಾಗಿ ಖುಷಿಯಾಗಿದೆ. ಕ್ರೀಡಾ ಮಾರ್ಗದರ್ಶಿಯಾಗಿ ಉತ್ತರಭಾರತದ ನೀರಜ್‌ಕುಮಾರ್, ತಾಯಿಯಾಗಿ ಮೀನಾಕಿರಣ್, ಸಂದೀಪ್‌ಮಲಾನಿ, ಪ್ರಶಾಂತ್ ಮುಂತಾದವರು ಅಭಿನಯಿಸುತ್ತಿದ್ದಾರೆ. ರಚನೆ,ಚಿತ್ರಕಥೆ, ಸಾಹಿತ್ಯ ಹಾಗೂ ನಿರ್ದೇಶನ ಮಾಡುತ್ತಿರುವ ಗನಿದೇವ್‌ಕಾರ್ಕಳ ಅವರು ಅಕ್ಷರ ಪ್ರೊಡಕ್ಷನ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಜಯಕುಮಾರ್‌ಭಕ್ತವತ್ಚಲಂ-ಯೋಗಿತಬಾಲಿ ಸಹ ನಿರ್ಮಾಪಕರುಗಳಾಗಿ ಗುರುತಿಸಿಕೊಂಡಿದ್ದಾರೆ. ಸಂಗೀತ ಅಮೋಘ್‌ಕೊಡಂಗಾಲ ಅವರದಾಗಿದೆ.  
 
ಎರಡನೆಯ ಸಿನಿಮಾ ಏಕಮ್ ಬಹುಕಥಾ ಹೊಂದಿದೆ. ಅಕ್ಷರಾ ಪ್ರೊಡಕ್ಷನ್ ಮೂಲಕ ಗಣಿದೇವ್ ಕಾರ್ಕಳ ನಿರ್ಮಾಣ ಮಾಡುತ್ತಿದ್ದಾರೆ. ಧಾರವಾಹಿ ಮತ್ತು ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿದ ಅನುಭವ ಇರುವ ವಿದ್ಯತ್‌ಶಿವ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಹಾಲಿವುಡ್‌ನ ಅಲೆಜಾಂಡ್ರೆ ಇನರುತು ನಿರ್ದೇಶನದ ಬೆಬಲ್ ಚಿತ್ರದ ಪ್ರೇರಣೆಯಿಂದ ನಿರ್ದೇಶಕರು ಕಥೆಯನ್ನು ರಚಿಸಿದ್ದಾರೆ. ಐದು ಜನರ ಜೀವನದ ಕಥೆಯಲ್ಲಿ ಒಬ್ಬ ವ್ಯಕ್ತಿಯಿಂದ ಆಗುವಂತ ಅನಾಹುತಗಳು ಇನ್ನೊಬ್ಬ ವ್ಯಕ್ತಿಗೆ ಬರುವಂತ ಘರ್ಷಣೆಗಳು ಒಂದಕ್ಕೊಂದು ಪ್ರಾರಂಭದಿಂದಲೇ ಲಿಂಕ್ ಆಗುತ್ತಾ ಹೋಗುತ್ತದೆ. ಜೊತೆಗೆ ಸುಂದರ ಪ್ರೀತಿ ಕಥೆಯಲ್ಲಿ ತೊಂದರೆಗಳು ಬರುತ್ತವೆ. ಅದರಿಂದ ಹೇಗೆ ಹೊರಗೆ ಬರುತ್ತಾರೆ. ಇಂತಹುದೇ ಜಾನರ್ ಅಂಥ ಹೇಳಲಿಕ್ಕ ಆಗುವುದಿಲ್ಲ. ಪ್ರೀತಿ, ರಕ್ತಪಾತ, ಫ್ಯಾಂಟಸಿ ಹೀಗೆ ತರಹೇವಾರಿ ಕಥೆಗಳು ಇರಲಿದೆ. ಸಂಗೀತ ಸಂಯೋಜಿಸುತ್ತಿರುವ ಅಮೋಘ್‌ಕೊಡಂಗಾಲ ಒಂದು ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಉಳಿದಂತೆ ಶಹನ, ಹರೀಶ್‌ರಾಮ್, ಮೀನಾಕಿರಣ್, ಹರೀಶ್‌ರಾಮ್, ಐಶ್ವರ್ಯ ಮುಂತಾದವರ ನಟನೆ ಇದೆ.
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed