ಪಕ್ಷಭೇದ ಮರೆತು ``ಪರಿಮಳ ಡಿಸೋಜಾ`` ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಮೂರು ಮಾಜಿ ಮುಖ್ಯಮಂತ್ರಿಗಳು
Posted date: 11 Tue, Oct 2022 01:18:52 PM
ಡಾ. ಗಿರಿಧರ್ ಹೆಚ್ ಟಿ ನಿರ್ದೇಶನದ ಹಾಗೂ ವಿಲೇಜ್ ರೋಡ್ ಫಿಲಂಸ್ ಸಂಸ್ಥೆಯ ಮೂಲಕ ವಿನೋದ್ ಶೇಷಾದ್ರಿ ಅವರು ನಿರ್ಮಿಸುತ್ತಿರುವ “ಪರಿಮಳ ಡಿಸೋಜಾ” ಚಲನಚಿತ್ರದ ಪೋಸ್ಟರ್  ಅನ್ನು ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಹೆಚ್ ಡಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಒಮ್ಮತದಿಂದ ಬಿಡುಗಡೆ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.
 
ಈ ಸಂದರ್ಭದಲ್ಲಿ ಇಡೀ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಬೆಂಗಳೂರು, ಬಿಡದಿ, ನೆಲಮಂಗಲ, ಕನಕಪುರ, ಹಾಸನ, ಚಿಕ್ಕಮಗಳೂರು ಸೇರಿದಂತೆ ಕರ್ನಾಟಕದ ಹಲವಾರು ಸ್ಥಳಗಳಲ್ಲಿ 72 ದಿನಗಳಿಗೂ ಅಧಿಕ ಕಾಲ ಚಿತ್ರೀಕರಣ ಮಾಡಿರುವ ಸಸ್ಪೆನ್ಸ್-ಥ್ರಿಲ್ಲರ್-ಆಕ್ಷನ್ ಜೊತೆಗೆ ಮನರಂಜನಾತ್ಮಕ ಕಥೆಯನ್ನು ಹೊಂದಿರುವ ಈ ಚಲನಚಿತ್ರಕ್ಕೆ ಜೋಗಿ ಪ್ರೇಮ್ ಅವರು ಒಂದು ಅತ್ಯುತ್ತಮ ಹಾಡನ್ನು ಹಾಡುವ ಮೂಲಕ ಶುಭ ಹಾರೈಸಿದ್ದಾರೆ. ಇವರ ಜೊತೆಗೆ ಖ್ಯಾತ ಚಲನಚಿತ್ರ ಸಾಹಿತಿಗಳಾದ ಡಾ. ವಿ ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಮತ್ತು ಕೆ ಕಲ್ಯಾಣ್ ಅವರು ಸಾಹಿತ್ಯವನ್ನು ರಚಿಸಿದ್ದಾರೆ. ಇವರುಗಳ ಸಾಹಿತ್ಯಕ್ಕೆ ಖ್ಯಾತ ಹಿನ್ನಲೆ ಗಾಯಕರಾದ ರಾಜೇಶ್ ಕೃಷ್ಣನ್, ಶ್ರುತಿ ವಿ ಎಸ್, ಸುಪ್ರಿಯಾ ರಾಮ್, ನಕುಲ್ ಅಭ್ಯಂಕರ್ ಮತ್ತು ಅನುರಾಧ ಭಟ್ ಅವರುಗಳು ಹಾಡಿದ್ದಾರೆ.
 
ಈ ಚಲನಚಿತ್ರಕ್ಕೆ ಕ್ರಿಸ್ಟೋಫರ್ ಜೇಸನ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಕೆ ರಾಮ್ ಅವರು ಛಾಯಾಗ್ರಹಣ, ಚಲನಚಿತ್ರದ ಸಂಕಲನವನ್ನು ಸಂಜೀವ್ ರೆಡ್ಡಿ ಮತ್ತು ಎಸ್.ಎಫ್.ಎಕ್ಸ್ ಹಾಗೂ 5.1 ಮಿಕ್ಸಿಂಗ್ ಅನ್ನು ಶಂಕರ್, ನೃತ್ಯ ನಿರ್ದೇಶನವನ್ನು ವಿಜಯನಗರ ಮಂಜು, ಅತ್ಯುತ್ತಮ ಆಕ್ಷನ್ ಸನ್ನಿವೇಶಗಳಿಗೆ ಬಂಡೆ ಚಂದ್ರು ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರವು ಅತಿ ಶೀಘ್ರದಲ್ಲಿ ಬಿಡುಗಡೆಯಾಗಲಿದ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed