ಮರ್ದಿನಿ ಕೊನೆಯ ಹಂತದ ಚಿತ್ರೀಕರಣ
Posted date: 01 Sun, Aug 2021 11:22:45 AM
ಅಂಕಿತ್ ಫಿಲಂಸ್ ಬ್ಯಾನರ್ ನಡಿ ಶ್ರೀಮತಿ ಭಾರತಿ ಜಗ್ಗಿ ರವರ ಚೊಚ್ಚಲ ನಿರ್ಮಾಣದ ಚಲನಚಿತ್ರ ಮರ್ದಿನಿ,, ಈ ಹಿಂದೆ "ದೇವರಂಥ ಮನುಷ್ಯ" ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ಕಿರಣ್ ಕುಮಾರ್ .ವಿ ರವರು ಈ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ,

ಈಗಾಗಲೇ ಎರಡು ಹಂತದ ಚಿತ್ರೀಕರಣ ಮುಗಿಸಿದ್ದ ತಂಡ ಕೊನೆಯ ಹಂತದ ಚಿತ್ರೀಕರಣಕ್ಕಾಗಿ 15 ದಿನಗಳ ಕಾಲ ಚಿಕ್ಕಮಗಳೂರಿಗೆ ತೆರಳಿ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಬಂದಿದ್ದಾರೆ ಮರ್ದಿನಿ ಚಿತ್ರತಂಡ..

ಈ ಚಿತ್ರದ ನಾಯಕಿ ರಿತನ್ಯ ಇದೇ ಮೊದಲ ಬಾರಿಗೆ ಬಣ್ಣ ಹಚ್ಚಲಿದ್ದು ಚಂದನವನದಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ , ಹೋಟೆಲ್ ಮ್ಯಾನೇಜ್ಮೆಂಟ್ ನಲ್ಲಿ ಗೋಲ್ಡ್ ಮೆಡೆಲ್ ಹಾಗು ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುವ ಅಕ್ಷಯ್ ಕೂಡ ಇದೇ ಮೊದಲ ಬಾರಿಗೆ ಬೆಳ್ಳಿ ಪರದೆಗೆ ಪರಿಚಯವಾಗುತ್ತಿದ್ದಾರೆ, ಮಜಾಭಾರತದ ಸುಶ್ಮಿತಾ ರವರು ಹಾಸ್ಯ ನಟಿಯಾಗಿ ನಗಿಸಲಿದ್ದಾರೆ, ಮನಮೋಹನ್ ರೈ, ಗವಿ ಸಿದ್ದಯ್ಯ, ಅಶೋಕ್,ತೃಪ್ತಿ, ಇಂಚರ ಹಾಗು ಇನ್ನಿತರ ನಟ ನಟಿಯರು ಚಿತ್ರದ ಕೆಲವು ಪ್ರಮುಖ ತಾರಾಗಣದಲ್ಲಿದ್ದಾರೆ,
ಚಿತ್ರಕ್ಕೆ ಕಥೆ ಚಿತ್ರಕಥೆ ಹಾಗು ಸಂಭಾಷಣೆ ಅಕ್ಷಯ್ ಮತ್ತು ಗಜೇಂದ್ರ ಬರೆದಿದ್ದಾರೆ.,
ಚಿತ್ರಕ್ಕೆ ಸಂಗೀತ ಹಿತನ್ ಹಾಸನ್ ನೀಡಿದರೆ , ಎನ್.ಎಮ್.ವಿಶ್ವ ರವರ ಸಂಕಲನವಿರುವ ಈ ಚಿತ್ರಕ್ಕೆ ಸಾಹಸ ದೃಶ್ಯಗಳ ನಿರ್ದೇಶನದ ಜವಾಬ್ದಾರಿ ಅಶೋಕ್ ಮಾಸ್ಟರ್ ರವರು ಹೊತ್ತಿರುತ್ತಾರೆ.

ಮರ್ದಿನಿ ಚಿತ್ರದ ವಿಶೇಷ ಪಾತ್ರದಲ್ಲಿ ಸೈಬೀರಿಯನ್ ಹಸ್ಕಿ ತಳಿಯ ನಾಯಿ ಅಭಿನಯಿಸುತ್ತಿರುವುದು ವಿಶೇಷ ಹಾಗು ಚಿತ್ರದ ಪ್ರಮುಖ ಆಕರ್ಷಣೆ .
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed