ಚೇರ್ಮನ್ ಮಾರ್ಚ್ ನಲ್ಲಿ ತೆರೆಗೆ
Posted date: 22 Wed, Feb 2023 � 08:44:01 AM
ದಾಕ್ಷಾಯಿಣಿ ಬ್ಯಾನರ್ ಅಡಿಯಲ್ಲಿ ಬಸವರಾಜ ಹಿರೇಮಠ ಅವರು ನಿರ್ದೇಶಿಸಿ, ಜೊತೆಗೆ ನಿರ್ಮಾಣವನ್ನೂ  ಮಾಡಿರುವ  ಚಿತ್ರ ಚೇರ್ಮನ್. ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುವ ಪ್ರೀತಿ ಸ್ನೇಹ ಮತ್ತು ಗ್ರಾಮ ಪಂಚಾಯತಿಯ ಅಭಿವೃದ್ಧಿಗೆ ಒತ್ತು ನೀಡುವ ಕಥಾಹಂದರ ಈ  ಚಿತ್ರದಲ್ಲಿದ್ದು,  ಭ್ರಷ್ಟಾಚಾರವನ್ನು ನಿರ‍್ಮೂಲನೆ ಮಾಡಿ ರಾಜಕೀಯಕ್ಕೆ ಯುವಕರನ್ನು ಸೆಳೆಯುವ ಕಂಟೆಂಟ್ ಹೊಂದಿದೆ. ಈಗಾಗಲೇ ಶೂಟಿಂಗ್ ಹಾಗೂ ಇತರೆ ಕೆಲಸಗಳನ್ನು ಮುಗಿಸಿಕೊಂಡು   ರಿಲೀಸಿಗೆ ಸಿದ್ದವಾಗಿರುವ ಈ ಚಿತ್ರ ಇದೇ ಮಾರ್ಚ್ ನಲ್ಲಿ ತೆರೆಕಾಣಲಿದೆ. 
 
ಈ ಚಿತ್ರದಲ್ಲಿ ಹುಬ್ಬಳ್ಳಿ ಹುಡುಗ ಮನು ನಾಯಕನಾಗಿ ಅಭಿನಯಿಸಿದ್ದು, ನಾಯಕಿಯರಾಗಿ ರಾಧಾ ಮತ್ತು ಹರ್ಷಲಾ ಹನಿ ಅಭಿನಯಿಸಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸಗೂರು ಸುತ್ತಲಿನ ಗ್ರಾಮಗಳು. ಐತಿಹಾಸಿಕ ಜಲದರ್ಗ ಕೋಟೆ, ಮಸ್ಕಿ ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಮಂಗಳೂರು ಬೆಂಗಳೂರು ಹುಬ್ಬಳ್ಳಿ ಸುತ್ತಮುತ್ತ. ಚೇರ್ಮನ್ ಗೆ ಚಿತ್ರೀಕರಣ ಮಾಡಲಾಗಿದೆ.
 
ಈ ಚಿತ್ರಕ್ಕೆ ಶಿವು ಬೆರಗಿ ಅವರ ಸಾಹಿತ್ಯ ಮತ್ತು ಸಂಗೀತ ನಿರ್ದೇಶನವಿದ್ದು  ಅನನ್ಯ ಭಟ್, ಮೆಹಬೂಬ್ ಸಾಬ್, ಚೇತನ್, ಶಾಂತಲಾ, ನವೀನ್  ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಈಗಾಗಲೇ ಈ ಚಿತ್ರದ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 
 
ಹಲಗೂರು ವೆಂಕಟೇಶ್ ಸಂಭಾಷಣೆ ಬರೆದು  ಸಹಾಯಕ ನಿರ್ದೇಶನ ಮಾಡಿದ್ದಾರೆ. ವಿಜಯ್ ಎಸ್. ಅವರ ಛಾಯಾಗ್ರಹಣ, ರಘು ಎಲ್. ಅವರ ಸಂಕಲನ, ಅಕುಲ್ ನೃತ್ಯ ನಿರ್ದೇಶನ, ಜಾಗ್ವಾರ್ ಸಣ್ಣಪ್ಪ ಅವರ ಸಾಹಸ ನಿರ್ದೇಶನವಿದೆ. 
 
ಉಳಿದ ಮುಖ್ಯ ಪಾತ್ರದಲ್ಲಿ ಬಲ ರಾಜವಾಡಿ,  ಶಂಕರ್ ಪಾಟೀಲ್, ಶಿವಕುಮಾರ್ ಆರಾಧ್ಯ, ಗವಿ ವಸ್ತ್ರದ್. ಪ್ರೇಮಲತಾ, ಆಶಾ ನಾಯಕ್, ಕಾಮಿಡಿ ಕಿಲಾಡಿ ಮುತ್ತುರಾಜ್. ಉತ್ತರ ಕರ್ನಾಟಕದ  ಪ್ರಸಿದ್ಧ ರಂಗಭೂಮಿ ಕಲಾವಿದರಾದ ಸಿದ್ದು  ನಾಲತವಾಡ ಹಾಗೂ ಲಿಖಿತೇಶ್, ಅಲ್ಲಾಭಕ್ಷ , ಶಶಿ, ಬದ್ರಿನಾರಾಯಣ್  ಸೇರಿದಂತೆ ಹಿರಿಯ ಕಲಾವಿದರು ಮತ್ತು ಸ್ಥಳೀಯ ಕಲಾವಿದರು ಅಭಿನಯಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed