ಶ್ರೀನಗರ ಕಿಟ್ಟಿ ಅಭಿನಯದ ಗೌಳಿ ಚಿತ್ರೀಕರಣ ಮುಕ್ತಾಯ
Posted date: 12 Wed, Oct 2022 12:09:35 PM
ಕನ್ನಡದ ಅದ್ಭುತ  ಮೇಕಿಂಗ್ ಚಿತ್ರ ಎಂದು ಗುರುತಿಸಿಕೊಂಡಿರುವ ಗೌಳಿ ಈಗಾಗಲೇ ತನ್ನ ಟೀಸರ್ ಹಾಗೂ ತಂದೆ, ಮಗಳ ನಡುವಿನ ಬಾಂಧವ್ಯದ ಹಾಡಿನಿಂದ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.  ಈಗಾಗಲೇ ಗೌಳಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಹುತೇಕ ಮುಕ್ತಾಯ ಹಂತ ತಲುಪಿದ್ದು, ಇತ್ತೀಚೆಗೆ ಚಿತ್ರೀಕರಿಸಿದ ಗೌಳಿಯ ಡ್ಯುಯೆಟ್  ಹಾಡೊಂದನ್ನು ಡಿಐ ಮಾಡಿ ಸೇರಿಸಿದರೆ ಸಿನಿಮಾ ಬಿಡುಗಡೆಗೆ ರೆಡಿಯಾದಂತೆ, ಕನಕಪುರ ಹತ್ತಿರದ ಸಂಗಮ ಫಾಲ್ಸ್ ಹಾಗೂ ನದಿಯ ಬ್ಯಾಕ್ ವಾಟರ್‌ನಲ್ಲಿ ಇತ್ತೀಚೆಗೆ ಪ್ರೇಮಗೀತೆಯ ಚಿತ್ರೀಕರಣ ನಡೆಸಿ ಶೂಟಿಂಗ್ ಗೆ ಕುಂಬಳಕಾಯಿ  ಶಾಸ್ತ್ರ ಮಾಡಿದೆ. 
 
ಹಳ್ಳಿಯ ಪರಿಸರದ ಬ್ಯಾಕ್‌ಡ್ರಾಪ್‌ನಲ್ಲಿ, ಮುರಳಿ ಅವರ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ನಾಯಕ 
ಶ್ರೀನಗರ ಕಿಟ್ಟಿ, ನಾಯಕಿ ಪಾವನಾಗೌಡ ಹಾಗೂ 40 ರಿಂದ 50 ಜನ  ನೃತ್ಯ ಕಲಾವಿದರು ಭಾವಹಿಸಿದ್ದರು. ಸದ್ಯದಲ್ಲೇ ಗೌಳಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನಡೆಸಲಾಗುವುದು,  ಇದೇ  ಸಂದರ್ಭದಲ್ಲಿ ಚಿತ್ರದ ಬಿಡುಗಡೆಯ ದಿನಾಂಕವನ್ನೂ ಸಹ ಪ್ರಕಟಿಸಲಾಗುವುದು. 
 
ನಿರ್ಮಾಪಕ ರಘು ಸಿಂಗಂ ಅವರು ಯಾವ ಹಂತದಲ್ಲೂ ಕಾಂಪ್ರಮೈಸ್ ಆಗದೆ, ಅಪಾರ ವೆಚ್ಚದಲ್ಲಿ ಈ ಚಿತ್ರವನ್ನು  ನಿರ್ಮಿಸಿದ್ದಾರೆ. ಸೂರ ಅವರ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ಜೀವನದಲ್ಲಿ ತುಂಬಾ ಎಮೋಷನಲ್ ಆಗಿರುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಅದ್ದೂರಿ ಮೇಕಿಂಗ್, ಲೊಕೇಶನ್, ಹೀಗೆ ಹಲವಾರು  ವಿಶೇಷತೆಗಳಿಂದ ಗೌಳಿ ಸದ್ದು ಮಾಡುತ್ತಿದೆ. ಇನ್ನು ಈ ಚಿತ್ರಕ್ಕೆ ಸಿರ್ಸಿ, ಯಲ್ಲಾಪುರ, ಹುಬ್ಬಳ್ಳಿ, ಬೆಂಗಳೂರು ಸುತ್ತಮುತ್ತ ಸುಮಾರು 60 ರಿಂದ 65 ದಿನಗಳ ಕಾಲ ಚಿತ್ರೀಕರಣ  ನಡೆಸಲಾಗಿದೆ.
 
ಘು ಸಿಂಗಂ ಅವರು ಪುತ್ರ ಸೋಹನ್ ಹೆಸರಿನಲ್ಲಿ ಸೋಹನ ಫಿಲಂ ಫ್ಯಾಕ್ಟರಿ  ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದಾರೆ. ನಾಯಕಿ ಪಾವನಾಗೌಡ ಮೊದಲಬಾರಿಗೆ ಪಕ್ಕಾ ಗ್ರಾಮೀಣ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಯಶ್‌ಶೆಟ್ಟಿ, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧಿ, ಗೋಪಾಲಕೃಷ್ಣ ದೇಶಪಾಂಡೆ, ಮರುಡಯ್ಯ, ಗೋವಿಂದೇಗೌಡ ಹೀಗೆ ಒಂದಷ್ಟು ಪಾತ್ರಗಳ ಲುಕ್ಕೇ ವಿಭಿನ್ನವಾಗಿದೆ. 
 
ನಿರ್ದೇಶಕ ಸೂರ ಅವರೇ ಚಿತ್ರದ ಕಥೆ, ಚಿತ್ರಕಥೆ  ರಚಿಸಿದ್ದಾರೆ. ಶಶಾಂಕ್ ಶೇಷಗಿರಿ ಅವರ ಸಂಗೀತ ಸಂಯೋಜನೆಯ ಈ ಚಿತ್ರದಲ್ಲಿ 3 ಹಾಡುಗಳಿವೆ. ಸಂದೀಪ್ ವಲ್ಲೂರಿ ಅವರ ಛಾಯಾಗ್ರಹಣ, ಉಮೇಶ್ ಅವರ ಸಂಕಲನ, ರಘು ಎಂ. ಅವರ ಕಲಾನಿರ್ದೇಶನ, ವಿಕ್ರಂ ಮೋರ್, ಅರ್ಜುನ್  ರೈ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed