ಶಿವನಪಾದ ಡಬ್ಬಿಂಗ್ ಮುಕ್ತಾಯ
Posted date: 06 Wed, Jul 2022 10:35:11 AM
ತುಪ್ಪದ ಬೆಡಗಿ ರಾಗಿಣಿ, ಲೂಸ್ ಮಾದ ಅಭಿನಯದ ``ಬಂಗಾರಿ, ಬೆಟ್ಟದದಾರಿ, ನಡಗಲ್ಲು, ಚಿತ್ರಗಳನ್ನು ನಿರ್ದೇಶನ ಮಾಡಿದ್ದ ಮಾ.ಚಂದ್ರು ಇದೀಗ  ``ಶಿವನಪಾದ ``ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
 
ಚಿತ್ರವನ್ನು ಸೆಪ್ಟಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವ ಎಲ್ಲಾ ಸಿದ್ದತೆಯನ್ನೂ ಚಿತ್ರ ತಂಡ ಮಾಡಿಕೊಂಡಿದೆ.
 
ಇತ್ತೀಚೆಗೆ  ರೇಣುಕಾಂಬ ಸ್ಡುಡಿಯೋದಲ್ಲಿ ಚಿತ್ರದ ಡಬ್ಬಿಂಗ್ ಕಾರ್ಯ ಮುಕ್ತಾಯಗೊಂಡಿದೆ.
 
ಚಿತ್ರದ ಎರಡು ಹಾಡುಗಳ ಚಿತ್ರೀಕಣ ಬಾಕಿ ಉಳಿದಿದ್ದು  ಸದ್ಯದಲ್ಲಿಯೇ ಮಂಗಳೂರು ,ಸಕಲೇಶಪುರ ಸುತ್ತ ಮುತ್ರ ಚಿತ್ರೀಕರಣ ಮಾಡುವ ಗುರಿ ಹೊಂದಲಾಗಿದೆ.
 
ಉತ್ತರ ಕರ್ನಾಟಕದ ಪ್ರಸಿದ್ದ ಪ್ರವಾಸಿ ತಾಣವಾದ ಟೂರಿಸ್ಟ್  ಸ್ಥಳವನ್ನು ಹಿನ್ನೆಲೆಯಾಗಿಟ್ಟುಕೊಂಡು ಲವ್ ,ಸಸ್ಪೆನ್ಸ್,ಥ್ರಿಲ್ಲರ್ ,ಕಾಮಿಡಿ ಜೊತೆಗೆ ಹಾರರ್ ,ಕ್ರೈಮ್ ಸ್ಟೋರಿ ಕಥೆಯನ್ನು  ಚಿತ್ರೀಕರಣ ಮಾಡಲಾಗಿದೆ...
 
ಚಿತ್ರಕ್ಕೆ ವೀಸಸ್ ಮೂರ್ತಿ, ವೀನಸ್ ನಾಗರಾಜು ಮೂರ್ತಿ ಛಾಯಾಗ್ರಾಹಣವಿದೆ.,ವೀರ ಸಮರ್ಥ್ ಸಂಗೀತ, ವೆಂಕಿ( ಯುಡಿವಿ) ಸಂಕಲನ, ವಿಜಯ್ ಭರಮಸಾಗರ ಸಾಹಿತ್ಯ, ಮಾಸ್ ಮಾದ ಸಾಹಸ, ಸ್ಟಾರ್ ನಾಗಿ ನೃತ್ಯ ನಿರ್ದೇಶನವಿದೆ.
 
ಚಿತ್ರದಲ್ಲಿ ಎಚ್.ಟಿ ಸಾಂಗ್ಲಿಯಾನ,ಆರ್. ನಾಗೇಶ್ ( ಬಿದರ್ ಅಗ್ರಹಾರ) ಆನಂದ್, ವರ್ಷಿತಾ ಗಿರೀಶ್, ಮೇಘನಾ ,ಬಲರಾಜವಾಡಿ, ನವೀನ್ ಪಡೀಲು, ಪೆರುಮಾಳ್ ವಿ., ಅಂಜಲಿ, ಜಿ ಡಿ ಹೆರಂಭ ಕುಮಟ, ಶೇಷಗಿರಿ ಸ್ವಾಮಿ, ವಿಕ್ರಮ್ ಆರ್, ಆಟೋ ನಾಗರಾಜು, ಮೀಸೆ ಮೂರ್ತಿ ಮುಂತಾದವರ ತಾರಾಬಳಗವಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed