ಹೆಸರಿಡದ ಚಿತ್ರಕ್ಕೆ ಮುಹೂರ್ತ
Posted date: 06 Thu, Oct 2022 12:24:38 PM
ಹೆಸರಿಡದ ಚಿತ್ರ ಪ್ರೊಡಕ್ಷನ್ ನಂ.1 ಸಿನಿಮಾದ ಮುಹೂರ್ತ ಸಮಾರಂಭವು ವಿಜಯ ದಶಮಿ ದಿನದಂದು ನಂದಿನಿ ಲೇಔಟ್‌ನ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ನಡೆಯಿತು. ಮಾಜಿ ಕಾರ್ಪೋರೇಟರ್ ರಾಜೇಂದ್ರಕುಮಾರ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಪುಟಾಣಿಸಫಾರಿ ವರ್ಣಮಯ ಮಠ ನೈಟ್‌ಕರ್ಫ್ಯೂ ಹಾಗೂ ಇದೇ ತಿಂಗಳು ಬಿಡುಗಡೆಯಾಗುತ್ತಿರುವ ವಾಸಂತಿ ನಲಿದಾಗ ಚಿತ್ರಗಳನ್ನು ನಿರ್ದೇಶನ ಮಾಡಿರುವ ರವೀಂದ್ರವೆಂಶಿ ಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ರೈತ, ಉದ್ಯಮಿಯಾಗಿರುವ ಚಿಕ್ಕಬದರಿಕಲ್ಲು ಮೂಲದ ಆರ್.ಕೃಷ್ಣಮೂರ್ತಿ ಎಂ.ಆರ್.ಕೆ. ಫಿಲಿಂಸ್ ಮುಖಾಂತರ ನಿರ್ಮಾಣ ಮಾಡುತ್ತಿರುವುದು ಹೊಸ ಅನುಭವ. ಹೀಗೊಂದು ರಕ್ತ ಚರಿತ್ರೆ ಅಂತ ಅಡಿಬರಹದಲ್ಲಿ ಹೇಳಿಕೊಂಡಿದೆ.
 
2004 ರ ಕಾಲಘಟ್ಟದಲ್ಲಿ ಕೆಆರ್‌ಎಸ್‌ದಲ್ಲಿ ನಡೆದಂತ ಸತ್ಯ ಘಟನೆಯನ್ನು ಆಧರಿಸಿದ ಸಿನಿಮಾವು ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಸಿದ್ದಗೊಳ್ಳುತ್ತಿದೆ. ವಾಸಂತಿ ನಲಿದಾಗ ಚಿತ್ರದ ನಾಯಕ ರೋಹಿತ್‌ಶ್ರೀಧರ್ ಅವರಿಗೆ ಎರಡನೇ ಅವಕಾಶ. ನಾಯಕಿ, ಉಳಿದ ತಾರಗಣದ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಿದೆ. ಹೆಸರಾಂತ ನಟ ಖಳನಾಗಿ ನಟಿಸುವ ಸಾಧ್ಯತೆ ಇದೆ. ಪ್ರಮೋದ್‌ಭಾರತೀಯ ಛಾಯಾಗ್ರಾಹಕ ಇನ್ನುಳಿದಂತೆ, ತಂತ್ರಜ್ಘರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. 
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed