ರಣವ್ಯೂಹ ಟ್ರೇಲರ್, ಅದ್ದೂರಿ ಹಾಡುಗಳು ಲೋಕಾರ್ಪಣೆ
Posted date: 30 Tue, Aug 2022 02:18:49 PM
ರಣವ್ಯೂಹ ಸಿನಿಮಾದ ಟ್ರೇಲರ್ ಹಾಗೂ ಹಾಡುಗಳ ಅನಾವರಣ ಕಾರ್ಯಕ್ರಮವು ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಶ್ರೀ ಶಿರಡಿ ಸಾಯಿ ಮೂವೀಸ್ ಬ್ಯಾನರ್ ಅಡಿಯಲ್ಲಿ ವೇಣುಕುಮಾರ್.ಎಂ.ಜಿ ಬಂಡವಾಳ ಹೂಡಿದ್ದಾರೆ. ಶ್ರೀಪತಿಪೂಜಾರಿ-ಶೃತಿಹರೀಶ್-ಮಂಜುಳಾ ಸಹ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಎಸ್.ಎಸ್.ಶಂಕರ್‌ನಾಗ್ ನಿರ್ದೇಶನದಲ್ಲಿ ಚಿತ್ರವು ಮೂಡಿಬಂದಿದೆ. 
 
ಕಥೆಯಲ್ಲಿ ಪ್ರತಿಯೊಂದು ಪಾತ್ರಗಳು ಪ್ರತ್ಯೇಕವಾಗಿದ್ದು, ಎಲ್ಲಾ ಕಡೆ ಮಾರ್ಪಾಟುಗಳು ಇರುತ್ತದೆ. ಒಬ್ಬ ಮನುಷ್ಯನಲ್ಲಿ ಆಂತರಿಕವಾಗಿ ಮೈಂಡ್‌ಸೆಟ್ ತುಂಬಿರುತ್ತದೆ. ಒಳ್ಳೆಯವನು, ಕೆಟ್ಟವನು ಅಂತ ಹೊರಗಡೆಯಿಂದ ಹೇಳಲಾಗುವುದಿಲ್ಲ. ಅವನ ಮುಖ ಒಂಥರ ಕಾಣುತ್ತದೆ. ಆ ಪರದೆಯು ಹೋಗ್ತಾ ಹೋಗ್ತಾ ಹಾಳಾಗುತ್ತಾ, ಬದಲಾವಣೆ ಆಗುತ್ತಾ ಹೋಗುತ್ತದೆ. ಕೊನೆಗೆ ಏನಾಗುತ್ತದೆ. ಹಾಗೆಯೇ ಎನ್‌ ಜಿ ಓ ಅಂಶಗಳನ್ನು ತೆಗೆದುಕೊಳ್ಳಲಾಗಿದ್ದು, ಇದನ್ನು ಏತಕ್ಕಾಗಿ ಬ್ಯಾನ್ ಮಾಡಿದ್ದು ಎಂಬುದನ್ನು ಹೇಳಲಾಗಿದೆ. ಒಬ್ಬ ಮನುಷ್ಯನನ್ನು ಮೇಕಪ್‌ನಲ್ಲಿ ರಿಕ್ರಿಯೇಟ್ ಮಾಡಬಹುದು. ಇಂತಹ ಹೊಸ ವಿಚಾರಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಇದೆಲ್ಲಾವನ್ನು ಕಮರ್ಷಿಯಲ್ ರೀತಿ, ಸೆಸ್ಪೆನ್ಸ್, ಥ್ರಿಲ್ಲರ್ ಮಾದರಿಯಲ್ಲಿ ತೋರಿಸಲಾಗಿದೆ. 
 
ರಿಯಾಲಿಟಿ ಷೋ ಮಜಾಭಾರತ್ ಖ್ಯಾತಿಯ ಅವಿನಾಶ್ ನಾಯಕ. ಯಶಾ ನಾಯಕಿಯಾಗಿ ಬಡ್ತಿ ಹೊಂದಿದ್ದಾರೆ. ನಿರ್ಮಾಪಕರ ಪತ್ನಿ ಸ್ಮಿತಾ ತನಿಖಾಧಿಕಾರಿಯಾಗಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಅವೀನ್, ಅಕ್ಷತ್, ವಿಸ್ಮಿತ್‌ರಾಜ್, ರಾಜ್‌ಮಂಜು, ಪ್ರೇಮ್‌ಕನ್ನಡರಾಜು, ರಾಜ್‌ಪ್ರತೀಕ್, ಯರ್ರಾಬಿರ್ರಿರಂಗರಾಜ್ ಮುಂತಾದವರು ನಟಿಸಿದ್ದಾರೆ. ಮೂರು ಹಾಡುಗಳಿಗೆ ಆರೋನ್‌ಕಾರ್ತಿಕ್‌ವೆಂಕಟೇಶ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಕೃಷ್ಣನಾಯ್ಕರ್, ಸಂಕಲನ ಪ್ರವೀಣ್‌ರಾಜ್, ಕಥೆ ವಿನಯ್‌ಕುಮಾರ್ ಅವರದಾಗಿದೆ. ಬೆಂಗಳೂರು, ಉಡುಪಿ,ಮಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಗೀತೆಗಳಿಗೆ ರಾಜೇಶ್‌ಕೃಷ್ಣನ್, ಇಂದೂನಾಗರಾಜ್ ಧ್ವನಿಯಾಗಿದ್ದಾರೆ. 
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed