ನವೆಂಬರ್ 11ಕ್ಕೆ ಸಮಂತಾ ಅಭಿನಯದ `ಯಶೋದಾ` ಬಿಡುಗಡೆ
Posted date: 18 Tue, Oct 2022 10:10:31 AM
ಸಮಂತಾ ಅಭಿನಯದ ‘ಯಶೋದಾ’ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಪ್ರೇಕ್ಷಕರಿಗೆ ಹಲವು ದಿನಗಳಿಂದ ಇತ್ತು. ಈಗ ಬಿಡುಗಡೆ ದಿನಾಂಕವು ಕೊನೆಗೂ ಘೋಷಣೆಯಾಗಿದ್ದು, ನವೆಂಬರ್ 11ರಂದು ಜಗತ್ತಿನಾದ್ಯಂತೆ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗುತ್ತಿದೆ.
 
ಈ ಚಿತ್ರವನ್ನು ಶಿವಲೆಂಕ ಕೃಷ್ಣ ಪ್ರಸಾದ್ ಅವರು ತಮ್ಮ ಶ್ರೀದೇವಿ ಮೂವಿ ಪ್ರೊಡಕ್ಷನ್ಸ್ ಬ್ಯಾನರ್ನಡಿ 14ನೇ ಚಿತ್ರವಾಗಿ ನಿರ್ಮಿಸುತ್ತಿದ್ದರೆ, ಹರಿ-ಹರೀಶ್ ಅವರು ನಿರ್ದೇಶನ ಮಾಡಿದ್ದಾರೆ.
 
ಇದೊಂದು ಹೊಸ ಶೈಲಿಯ ಆಕ್ಷನ್ ಥ್ರಿಲ್ಲರ್ ಎನ್ನುವ ನಿರ್ಮಾಪಕ ಶಿವಲೆಂಕ ಕೃಷ್ಣಪ್ರಸಾದ್, ಈ ಚಿತ್ರದಲ್ಲಿ ಸಸ್ಪೆನ್ಸ್ ಮತ್ತು ಎಮೋಷನ್ಗಳು ಸಮವಾಗಿ ಬೆರೆತಿದ್ದು, ‘ಪ್ರೇಕ್ಷಕರನ್ನು ಸೀಟಿನಂಚಿನಲ್ಲಿ ಕೂರಿಸುವ ಶಕ್ತಿ ಹೊಂದಿದೆ. ಸಮಂತಾ ಈ ಚಿತ್ರದ ಆಕ್ಷನ್ ದೃಶ್ಯಗಳಿಗಾಗಿ ಅವರು ಬೆವರು ಮತ್ತು ರಕ್ತವನ್ನೇ ಹರಿಸಿದ್ದಾರೆ ಎಂದರೆ ತಪ್ಪಿಲ್ಲ. ಬರೀ ತೆಲುಗು ಅವತರಣಿಕೆಯಷ್ಟೇ ಅಲ್ಲ, ತಮಿಳಿನಲ್ಲೂ ಅವರು ಡಬ್ಬಿಂಗ್ ಮಾಡಿದ್ದಾರೆ. ಇನ್ನು. ಮಣಿಶರ್ಮ ಅವರ ಹಿನ್ನೆಲೆ ಸಂಗೀತ ಈ ಚಿತ್ರದ ಹೈಲೈಟ್ ಆಗಿ ಮೂಡಿಬಂದಿದೆ. ಈಗಾಗಲೇ ತೆಲುಗು ಚಿತ್ರದ ಅವತರಣಿಕೆಯು ಸೆನ್ಸಾರ್ ಆಗಿತ್ತು, ಸದ್ಯದ್ಲ್ಲೇ ಬೇರೆ ಭಾಷೆಗಳ ಸೆನ್ಸಾರ್ ಆಗಲಿದೆ. ತಾಂತ್ರಿಕ ಸೇರಿದಂತೆ ಯಾವುದೇ ವಿಷಯದಲ್ಲೂ ರಾಜಿಯಾಗದೇ, ಈ ಚಿತ್ರವನ್ನು ಅದ್ಧೂರಿ ಬಜೆಟ್ ನಿರ್ಮಿಸಲಾಗಿದೆ. 100ಕ್ಕೂ ಹೆಚ್ಚು ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು, ಹೊಸ ಶೈಲಿಯ ಸಿನಿಮಾಗಳಿಗೆ ಹಾತೊರೆಯುತ್ತಿರುವ ಪ್ರೇಕ್ಷಕರು ಈ ಚಿತ್ರವನ್ನು ಮೆಚ್ಚುತ್ತಾರೆ ಎಂಬ ನಿರೀಕ್ಷೆ ಇದೆ. ಯಶೋದಾ, ನವೆಂಬರ್ 11ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ’ ಎನ್ನುತ್ತಾರೆ.
ಸಮಂತಾ ಜತೆಗೆ ಈ ಚಿತ್ರದಲ್ಲಿ ವರಲಕ್ಷ್ಮೀ ಶರತ್ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮ, ಸಂಪತ್ ರಾಜ್, ಶತ್ರು, ಮಧಿರಿಮಾ, ಕಲ್ಪಿಕಾ ಗಣೇಶ್, ದಿವ್ಯ ಶ್ರೀಪಾದ, ಪ್ರಿಯಾಂಕಾ ಶರ್ಮ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
‘ಯಶೋದಾ’ ಚಿತ್ರಕ್ಕೆ ಎಂ. ಸುಕುಮಾರ್ ಛಾಯಾಗ್ರಹಣ ಮಾಡಿದ್ದು, ಪುಲಗಂ ಚಿನ್ನಾರಾಯಣ ಮತ್ತು ಡಾ ಚಲ್ಲ ಭಾಗ್ಯಲಕ್ಷ್ಮೀ ಅವರ ಸಂಭಾಷಣೆ ಮತ್ತು ರಾಮಜೋಗಯ್ಯ ಶಾಸ್ತ್ರಿ ಅವರ ಸಾಹಿತ್ಯ ಈ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed