ಮಾನ್ಸೂನ್ ರಾಗ ಈವಾರ ತೆರೆಗೆ
Posted date: 14 Wed, Sep 2022 08:10:17 AM
ನಟ ಡಾಲಿ ಧನಂಜಯ್, ರಚಿತಾರಾಮ್ ಅಭಿನಯದ ಬಹುನಿರೀಕ್ಷೆಯ ಚಿತ್ರ ಮಾನ್ಸೂನ್ ರಾಗ ಈ ಶುಕ್ರವಾರ (16) ರಾಜ್ಯಾದ್ಯಂತ  ತೆರೆಕಾಣುತ್ತಿದೆ.  ಈಗಾಗಲೇ ತನ್ನ ಮೇಕಿಂಗ್ ಹಾಗೂ ಹಾಡುಗಳಿಂದಲೇ ಸಾಕಷ್ಟು ಕುತೂಹಲ‌ ಹುಟ್ಟಿಸಿರುವ ಚಿತ್ರ ಇದಾಗಿದ್ದು ಬಡವ ರಾಸ್ಕಲ್, ರತ್ನನ್ ಪ್ರಪಂಚ ಚಿತ್ರಗಳ ನಂತರ ಧನಂಜಯ್ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಇದಾಗಿದೆ. 
ಮಾನ್ಸೂನ್ ರಾಗ ಪಕ್ಕಾ ರೊಮ್ಯಾಂಟಿಕ್ ಲವ್‌ಸ್ಟೋರಿ ಇರುವ ಚಿತ್ರವಾಗಿದ್ದು,
 
ತನ್ನ ವಿಭಿನ್ನ ಟೀಸರ್ ಹಾಗೂ ಹಾಡಿನ ಮೂಲಕವೇ ಸಿನಿಪ್ರಿಯರ ಗಮನ ಸೆಳೆದಿದೆ. ಧನಂಜಯ್ ಅವರ ಜೊತೆಗೆ ಬೆಡಗಿ ರಚಿತಾರಾಮ್  ನಾಯಕಿಯಾಗಿ ಅಭಿನಯಿಸಿದ್ದಾರೆ.
 
ಪುಷ್ಪಕವಿಮಾನ ಖ್ಯಾತಿಯ ರವೀಂದ್ರನಾಥ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ  ವಿಖ್ಯಾತ್ ಎ.ಆರ್. ಅವರು ಬಂಡವಾಳ ಹಾಕಿ ನಿರ್ಮಿಸಿದ್ದಾರೆ. ಇಡೀ ಚಿತ್ರದ ಕಥೆ ಮುಂಗಾರು ಮಳೆಯೊಳಗೇ ನಡೆಯುತ್ತದೆ ಎನ್ನಲಾಗಿದ್ದು, ಟೀಸರ್‌ನಲ್ಲಿ ಮಳೆಯ ಜೊತೆಗೆ ನೆರಳು ಬೆಳಕಿನ ಹಿನ್ನೆಲೆಯ ಚಿತ್ರೀಕರಣವೂ ಸೊಗಸಾಗಿ ಮೂಡಿಬಂದದೆ. ಎಸ್.ಕೆ. ರಾವ್  ಅವರ ಸಿನಿಮಾಟೋಗ್ರಫಿ ಈ ಚಿತ್ರಕ್ಕಿದ್ದು, ಚಿತ್ರದ ಸುಂದರ ಹಾಡುಗಳಿಗೆ ಅನೂಪ್ ಸೀಳಿನ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed