ಸಂಕಷ್ಟಕರ ಗಣಪತಿ ಹಿಂದಿಗೆ ರಿಮೇಕ್
Posted date: 14 Sat, Aug 2021 02:55:56 PM
ಸಂಕಷ್ಟಕರ ಗಣಪತಿ ಎಂಬ ಏಲಿಯನ್ ಹ್ಯಾಂಡ್ ಸಿಂಡ್ರೋಮ್ ನ ಕಥಾಹಂದರ ಹೊಂದಿದ ಕನ್ನಡದ ಚಿತ್ರದ ಹಿಂದಿ ರಿಮೇಕ್ ಹಕ್ಕುಗಳನ್ನು  "ಕಾರ್ವಾನ್" ಮತ್ತು "ರಶ್ಮಿ ರಾಕೆಟ್" ಖ್ಯಾತಿಯ "ಆಕರ್ಷ್ ಖುರಾನಾ" ರವರು ನಿರ್ಮಾಪಕರಾದ ಸನ್ನಿ ಖುರಾನಾ ಹಾಗೂ ವಿಕಾಸ್ ಶರ್ಮಾ ಜೊತೆಗೂಡಿ ಖರೀದಿಸಿ "ಬಾಯೆ ಹಾಥ್ ಕಾ ಖೇಲ್" ಎನ್ನುವ ಶೀರ್ಷಿಕೆಯಲ್ಲಿ ನಿರ್ಮಿಸುತ್ತಾರೆ ಎಂದು ತಿಳಿದುಬಂದಿದೆ.

2018ರಲ್ಲಿ ತೆರೆಕಂಡ ಈ ಚಿತ್ರವು ಪ್ರೇಕ್ಷಕರ ಮತ್ತು ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿ ನಂತರ ಅಮೆಜಾನ್ ಪ್ರೈಮ್ ನಲ್ಲಿ ಪ್ರಸಾರವಾಗುತ್ತಿತ್ತು.

ಅರ್ಜುನ್ ಕುಮಾರ್ ಅವರ ನಿರ್ದೇಶನ, ಲಿಖಿತ್ ಶೆಟ್ಟಿ, ಅಚ್ಯುತ ಕುಮಾರ್, ಶೃತಿ ಗೊರಾಡಿಯಾ, ನಾಗಭೂಷಣ, ಮಂಜುನಾಥ ಹೆಗಡೆ ಮುಂತಾದವರ ತಾರಾಗಣ ಈ ಚಿತ್ರಕ್ಕಿತ್ತು. ಉದಯ್ ಲೀಲಾ  ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ರವರ ಸಂಗೀತ, ರಘು ನಿಡುವಳ್ಳಿ ಸಂಭಾಷಣೆ ಮತ್ತು   ವಿಜೇತ್ ಚಂದ್ರ, ಮಧು ತುಂಬಕೆರೆ ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed