ಹಾಲಿವುಡ್ ಶೈಲಿಯ ಕನ್ನಡ ಮತ್ತು ತಮಿಳು ಚಿತ್ರ `ಮರ್ಡರ್ ಲೈವ್` ನಲ್ಲಿ ಕನ್ನಡತಿ ಶರ್ಮಿಳಾ ಮಾಂಡ್ರೆ ನಟನೆ!
Posted date: 01 Sat, Oct 2022 08:06:57 AM
ಕನ್ನಡತಿ ಶರ್ಮಿಳಾ ಮಾಂಡ್ರೆ `ಮಿರತ್ತಲ್` ಎಂಬ ತಮಿಳು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಈಗ 10 ವರ್ಷಗಳ ನಂತರ `ಮರ್ಡರ್ ಲೈವ್`ಎಂಬ ಹಾಲಿವುಡ್ ಶೈಲಿಯ ಕನ್ನಡ ಮತ್ತು ತಮಿಳು ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
 
`ಮರ್ಡರ್ ಲೈವ್` ಒಂದು ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಚಿತ್ರವಾಗಿದ್ದು, `ಬ್ಲೈಂಡ್ ಡೇಟ್`, `ಸ್ಕೈ ಹೈ`, `ಗ್ಲಿಚ್` ಮುಂತಾದ ಹಾಲಿವುಡ್ ಚಿತ್ರಗಳನ್ನು ನಿರ್ದೇಶಿಸಿರುವ ನಿಕೋ ಮಾಸ್ತೋರಾಕಿಸ್ ಅವರ ಕಥೆಯನ್ನು ಆಧರಿಸಿದೆ. ಸೈಕೋ ಕಿಲ್ಲರ್ ಮತ್ತು ನಾಲ್ವರು ಮಹಿಳೆಯರ ಸುತ್ತ ಸುತ್ತುವ ಈ ಚಿತ್ರದಲ್ಲಿ, ಕಷ್ಟದ ಪರಿಸ್ಥಿಯಲ್ಲಿ ಸಾಮಾನ್ಯ ಮನುಷ್ಯರೂ ಹೇಗೆ ಸಿಡಿದೆದ್ದು ಹೀರೋಗಳಾಗುತ್ತಾರೆ ಎಂದು ಹೇಳಲಾಗಿದೆ.
 
ಸೈಕೋ ಕಿಲ್ಲರ್ ಒಬ್ಬ ಜಗತ್ತಿನ ಯಾವುದೇ ಕಂಪ್ಯೂಟರ್ ಹ್ಯಾಕ್ ಮಾಡಿ, ಅದರ ಮೂಲಕ ಲೈವ್ ಆಗಿ ಕೊಲೆ ಮಾಡುವ ಕಥೆ ಇರುವ ಈ ಚಿತ್ರವನ್ನು ಸಂಪೂರ್ಣವಾಗಿ ಇಂಗ್ಲೆಂಡ್‌ನಲ್ಲಿ ಚಿತ್ರೀಕರಿಸಲಾಗಿದೆ. ಸೂರ್ಯ ಅಭಿನಯದ `ಇಟಿ` ಮತ್ತು ಶಿವಕಾರ್ತಿಕೇಯನ್ ಅಭಿನಯದ `ಡಾಕ್ಟರ್` ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿದ್ದ ವಿನಯ್ ರೈ, ಈ ಚಿತ್ರದಲ್ಲಿ ಬಹಳ ಕ್ಲಿಷ್ಟಕರವಾದ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ವಿಭಿನ್ನ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿರುವ ಕನ್ನಡತಿ ಶರ್ಮಿಳಾ ಮಾಂಡ್ರೆ, ಈ ದ್ವಿಭಾಷಾ ಚಿತ್ರದಲ್ಲಿ ನಾಯಕಿಯಾಗಿದ್ದಾರೆ. ಇವರಿಬ್ಬರ ಜೊತೆಗೆ ಹಾಲಿವುಡ್ ನಟಿ ನವೋಮಿ ವಿಲ್ಲೋ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 
 
ಡಾಟ್‌ಕಾಮ್ ಎಂಟರ್ಟೈನ್ಮೆಂಟ್ ಸಂಸ್ಥೆಯಡಿ ಈ ಚಿತ್ರ ನಿರ್ಮಾಣವಾಗಿದ್ದು, ಮುರುಗೇಶ್ ನಿರ್ದೇಶನ ಮಾಡಿದ್ದಾರೆ. ಅಪಾರ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಅತ್ಯುನ್ನತ ತಂತ್ರಜ್ಞಾನ ಬಳಸಿ ಚಿತ್ರೀಕರಣ ಮಾಡಲಾಗಿದೆ. ಪ್ರಶಾಂತ್ ಡಿ ಸಂಗೀತ ಸಂಯೋಜಿಸಿರುವ ಈ ಚಿತ್ರಕ್ಕೆ ಮದನ್ ಅವರ ಸಂಕಲನವಿದೆ.
ಈಗಾಗಲೇ `ಮರ್ಡರ್ ಲೈವ್` ಚಿತ್ರದ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed