ಬೆಂಗಳೂರು ಬಾಯ್ಸ್ ಚಿತ್ರದಲ್ಲಿ ಸಚಿನ್ ಚಲುವರಾಯಸ್ವಾಮಿ‌ ಲುಕ್ ರಿವೀಲ್
Posted date: 10 Sun, Jul 2022 08:30:39 AM
ಹ್ಯಾಪಿ ಬರ್ತಡೇ ಸಿನಿಮಾ ಮೂಲಕ ಭರವಸೆ ಮೂಡಿಸಿದ್ದ ಸಚಿನ್‌ ಚಲುವರಾಯಸ್ವಾಮಿ `ಬೆಂಗಳೂರು ಬಾಯ್ಸ್` ಸಿನಿಮಾ ಮೂಲಕ ಮತ್ತೆ ಬೆಳ್ಳಿತೆರೆಗೆ ಲಗ್ಗೆ ಇಡಲು ಸಜ್ಜಾಗಿದ್ದಾರೆ. ಇದೀಗ ಸಚಿನ್ ಲುಕ್ ನ್ನು ಚಿತ್ರತಂಡ ರಿವೀಲ್ ಮಾಡಿದೆ. ಅರ್ಜುನ್ ಎಂಬ ಕಾಲೇಜ್ ಹುಡ್ಗನಾಗಿ ಸಚಿನ್ ಬಣ್ಣ ಹಚ್ಚಿದ್ದು, ಇವರಿಗೆ ಜೋಡಿಯಾಗಿ ವೈನಿಧಿ ಜಗದೀಶ್ ಕಾಣಿಸಿಕೊಂಡಿದ್ದಾರೆ.  

ಈಗಾಗ್ಲೇ ಚಿತ್ರತಂಡ ಒಬ್ಬರ ಪಾತ್ರಗಳನ್ನು ಚಿತ್ರರಸಿಕರಿಗೆ ಪರಿಚಯ ಮಾಡಿಕೊಡ್ತಿದೆ. ಅದರಂತೆ ಈಗ ಸಚಿನ್ ಚಲುವರಾಸ್ವಾಮಿ ಪಾತ್ರದ ಬಗ್ಗೆ ಸಣ್ಣದೊಂದು ಇಂಟ್ ಕೊಟ್ಟಿದೆ. ಇನ್ನೂ ಬೆಂಗಳೂರು ಬಾಯ್ಸ್ ಚಿತ್ರದಲ್ಲಿ ಅಭಿಷೇಕ್ ದಾಸ್, ಚಂದನ್ ಆಚಾರ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದು, ಸೋನಿ ಅಭಿಷೇಕ್ ಗೆ ಜೋಡಿಯಾಗಿ ಅಭಿನಯಿಸ್ತಿದ್ದಾರೆ. ಗುರುದತ್ ಗಾಣಿಗ ಕ್ರಿಯೇಟಿವ್ ಡೈರೆಕ್ಟರ್ ಆಗಿ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.

ರೋಮ್ಯಾಂಟಿಕ್ ಕಾಮಿಡಿ ಜಾನರ್ ಕಥೆಯಾಗಿರುವ ಬೆಂಗಳೂರು ಬಾಯ್ಸ್ ಸಿನಿಮಾ ಯೂತ್ಸ್ ಗೆ ಇಷ್ಟವಾಗಲಿದೆ. ವಿಕ್ರಂ ಕೆ ವೈ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಪ್ರಶಾಂತ್ ರಾವ್ ಪುರಂ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದು, ರ್ಯಾಪರ್ ಆಲೋಕ್ ಹಾಗೂ ಧರ್ಮವಿಶ್ ಸಂಗೀತ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed