ಕನ್ನಡಿಗರ ಹಿರಿಮೆಯ ಸಿರಿಕನ್ನಡ ವಾಹಿನಿ 5ನೇ ವಸಂತಕ್ಕೆ
Posted date: 13 Thu, Oct 2022 � 08:10:41 AM
ಕನ್ನಡಿಗರ ಹಿರಿಮೆಯ ಸಿರಿಕನ್ನಡ ವಾಹಿನಿ ನಾಲ್ಕನೇ ವಸಂತವನ್ನು ಪೂರೈಸಿ 5ನೇ ವಸಂತಕ್ಕೆ ಕಾಲಿಡುತ್ತಿದೆ. ತನ್ನ ಐದನೇ ವರ್ಷದ ವಿಶೇಷತೆಗೆ ಹಲವು ಹೊಸತನವನ್ನು ಕನ್ನಡಿಗರಿಗೆ ನೀಡುವ ಉದ್ದೇಶದಿಂದ ತನ್ನ  ವ್ಯಾಪ್ತಿಯನ್ನು ವಿಸ್ತರಿಸುತ್ತಾ ಸಾಗಿದೆ..
 
ಈಗಾಗಲೇ ವಿಶ್ವದಾದ್ಯಂತ ಎಲ್ಲಾ ಕೇಬಲ್ ಹಾಗೂ ಡಿಟಿಎಚ್ ಜಾಲಗಳಲ್ಲೂ ಲಭ್ಯವಿರುವ ಸಿರಿ ಕನ್ನಡ ಇದೆ ಅಕ್ಟೋಬರ್ 10 ರಿಂದ ಸನ್ ಡೈರೆಕ್ಟ್ ಡಿಟಿಹೆಚ್‍ನಲ್ಲೂ ತನ್ನ ಪ್ರಸಾರವನ್ನು ಆರಂಭಿಸುವ ಮೂಲಕ ನಾಡಿನ ಎಲ್ಲಾ ಮನೆಮನೆಗಳನ್ನು ತಲುಪಿದೆ.ಸನ್ ಡೈರೆಕ್ಟ್ ನ ಚಾನೆಲ್ ನಂಬರ್ 264 ರಲ್ಲಿ ಲಭ್ಯವಿದ್ದು ವೀಕ್ಷಕರು ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅತ್ಯುತ್ತಮ ಧಾರಾವಾಹಿ ಮತ್ತು ಕಾರ್ಯಕ್ರಮಗಳ ಮನರಂಜನೆಯನ್ನು ಆನಂದಿಸಬಹುದಾಗಿದೆ..
 
ಇದೇ ಅಕ್ಟೋಬರ್ 31 ರಿಂದ ಹೆಸರಾಂತ ನಿರ್ದೇಶಕರಾದ ಟಿ.ಎನ್ .ಸೀತಾರಾಮ್ ನಿರ್ದೇಶನದ ಜನಪ್ರಿಯ ಧಾರಾವಾಹಿ ಮಾಯಾಮೃಗದ ಹೊಸ ಅಧ್ಯಾಯದ ಹೊಸ ಸಂಚಿಕೆಗಳ ಮತ್ತೆ ಮಾಯಾಮೃಗ ರಾತ್ರಿ 9:00ಗೆ ನಿಮ್ಮ ಸಿರಿ ಕನ್ನಡದಲ್ಲಿ ಪ್ರಸಾರವಾಗಲಿದೆ.
 
ಇದರ ಜೊತೆಗೆ ಈಗಾಗಲೇ ಯಶಸ್ವಿಯಾಗಿ ಪ್ರಸಾರವಾಗುತ್ತಿರುವ ಎಸ್ .ಎನ್ .ಸೇತುರಾಮ್ ನಟಿಸಿ ನಿರ್ದೇಶಿಸಿರುವ ಯುಗಾಂತರ ಧರ್ಮಕ್ಕೂ ಮಿಗಿಲಾದ ಪ್ರೇಮ ಕಥೆ "ರಜಿಯಾ ರಾಮ್",
 
ರಾಘವೇಂದ್ರ ರಾಜಕುಮಾರ್ ನಿರ್ಮಾಣದ ಅದ್ದೂರಿ ದೃಶ್ಯಕಾವ್ಯ "ವಿಜಯದಶಮಿ" ಹಾಗೂ ಅಮ್ಮ ಮಗಳ ಬಾಂಧವ್ಯದ ಕಥೆ"ಅಮ್ಮನ ಮದುವೆ" ಧಾರಾವಾಹಿಗಳು ಕೂಡ ವೀಕ್ಷಕರ ಮನಸೂರೆಗೊಂಡಿವೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed