ಮುಹೂರ್ತದ ದಿನದಿಂದಲೂ ಸಾಕಷ್ಟು ಕುತೂಹಲ ಹುಟ್ಟಿಸಿರುವ ``ಶುಗರ್ ಫ್ಯಾಕ್ಟರಿ`` ಚಿತ್ರದ ಚಿತ್ರೀಕರಣ ಮುಕ್ತಾಯ.
Posted date: 14 Sat, May 2022 01:18:04 PM
ಚಿತ್ರೀಕರಣ ಆರಂಭದ ದಿನದಿಂದಲ್ಲೂ ಸಾಕಷ್ಟು ಕುತೂಹಲ ಹುಟ್ಟಿಸಿರುವ ``ಶುಗರ್ ಫ್ಯಾಕ್ಟರಿ`` ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಇತ್ತೀಚೆಗೆ ನೆಲಮಂಗಲದ ಬಳಿಯ ಅಂಕಿತ್ ವಿಸ್ತಾದಲ್ಲಿ ಕೊನೆಯ ಸನ್ನಿವೇಶವನ್ನು ಚಿತ್ರಿಸಿಕೊಳ್ಳುವುದರೊಂದಿಗೆ ನಿರ್ದೇಶಕ ದೀಪಕ್ ಅರಸ್  ಚಿತ್ರೀಕರಣ ಪೂರ್ಣಗೊಳಿಸಿ, ಕುಂಬಳಕಾಯಿ ಒಡೆದಿದ್ದಾರೆ. ಚಿತ್ರೀಕರಣ ಮುಕ್ತಾಯ ದಿನದ ಸಂಭ್ರಮವನ್ನು ಚಿತ್ರತಂಡ ಸಂತಸದಿಂದ ಆಚರಿಸಿದೆ.

ಗೋವಾ, ಬೆಂಗಳೂರು, ಮೈಸೂರು ಹಾಗೂ ಕಜಾಕಿಸ್ಥಾನದಲ್ಲಿ ‍55 ದಿನಗಳ ಚಿತ್ರೀಕರಣ ನಡೆದಿದೆ. ಅದ್ದೂರಿ ಸೆಟ್ ಗಳು ಈ ಚಿತ್ರದ ಪ್ರಮುಖ ಆಕರ್ಷಣೆ. 

ವಿಭಿನ್ನ ಪೋಸ್ಟರ್, ವಿನೂತನ ಪ್ರಚಾರದ ಮೂಲಕ ``ಶುಗರ್ ಫ್ಯಾಕ್ಟರಿ`` ಈಗಾಗಲ್ಲೇ ಸಿನಿರಸಿಕರಲ್ಲಿ ಕುತೂಹಲ ಹುಟ್ಟಿಸಿದೆ‌. "ಶುಗರ್ ಫ್ಯಾಕ್ಟರಿ" ಹೇಗಿರಬಹುದೆಂಬ? ಕೌತುಕ ಎಲ್ಲರಲ್ಲೂ ಮನೆಮಾಡಿದೆ. ಚಿತ್ರ ತೆರೆಯ ಮೇಲೆ ನೋಡುವ ಕಾತುರ ಹೆಚ್ಚಾಗಿದೆ.

ಚಿತ್ರೀಕರಣ ಮುಕ್ತಾಯವಾದ ಬೆನ್ನಲ್ಲೇ ಸಂಗೀತ ನಿರ್ದೇಶಕ ಕಬೀರ್ ರಫಿ ``ಶುಗರ್ ಫ್ಯಾಕ್ಟರಿ`` ಯನ್ನು ರೀರೆಕಾರ್ಡಿಂಗ್ ನಿಂದ ಶೃಂಗಾರಿಸುತ್ತಿದ್ದಾರೆ.

ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿದ್ದು,  ಸೋನಾಲ್ ಮಾಂಟೆರೊ, ಶಿಲ್ಪಾ ಶೆಟ್ಟಿ ಹಾಗೂ ಅದ್ವಿತಿ ಶೆಟ್ಟಿ ಮೂವರು "ಶುಗರ್ ಫ್ಯಾಕ್ಟರಿ" ಯ ನಾಯಕಿಯರು. ರಂಗಾಯಣ ರಘು, ಗೋವಿಂದೇ ಗೌಡ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಈ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು
 
ಬಾಲಮಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಗಿರೀಶ್ ಆರ್ ಅವರು ನಿರ್ಮಿಸುತ್ತಿದ್ದಾರೆ.

ಜಯಂತ್ ಕಾಯ್ಕಿಣಿ,ಯೋಗರಾಜ್ ಭಟ್, ಚೇತನ್ ಕುಮಾರ್, ಚಂದನ್ ಶೆಟ್ಟಿ, ಅರಸು ಅಂತಾರೆ, ರಾಘವೇಂದ್ರ ಕಾಮತ್, ಗೌಸ್ ಫಿರ್ ಈ ಚಿತ್ರದ ಹಾಡುಗಳನ್ನು ರಚಿಸಿದ್ದಾರೆ. ಯೋಗಾನಂದ್ ಹಾಗೂ ಚೇತನ್ ಕುಮಾರ್ ಸಂಭಾಷಣೆ ಬರೆದಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ ಹಾಗೂ ಅರ್ಜುನ್ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.‌
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed