ಈ ಹಿಂದೆ ಮೊಂಭತ್ತಿ ಎಂಬ ಚಿತ್ರವನ್ನು ನಿರ್ಮಿಸಿ, ನಟಿಸಿದ್ದ ರಾಜ್ ಪ್ರಭು ಈಗ ಉದಯ ಆರ್ಟ್ಸ್ ಮತ್ತು ಮ್ಯಾಂಡ್ ರೋಶ್ ಲಿ. ಸಂಸ್ಥೆಯ ಮೂಲಕ ಸುಖಾಂತ್ಯ ಎಂಬ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇವರಜೊತೆ ಚಂದ್ರಶೇಖರ್ ಸಹನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.
ಈ ಹಿಂದೆ ಭಾಗ್ಯ ರಾಜ್ ಚಿತ್ರದಲ್ಲಿ ನಟಿಸಿದ್ದ ಮಹೇಶ್(ಲೂಸ್ ಮಾದ ಯೋಗಿ ಅಣ್ಣ) ಈ ಚಿತ್ರದಲ್ಲಿ ನಾಯಕನಾಗಿದ್ದು, ಮೊಂಬತ್ತಿ, ಛಾಯಾ ಚಿತ್ರಗಳ ನಟ ರಾಜ್ ಪ್ರಭು ಮತ್ತೊಬ್ಬ ನಾಯಕನಾಗಿದ್ದಾರೆ.
ನಾಯಕ ಒಬ್ಬ ಕುರುಡ, ನಾಯಕಿ ಸತ್ತನಂತರ ಆತನಿಗೆ ತನ್ನ ಕಣ್ಣುಗಳನ್ನು ದಾನ ಮಾಡುತ್ತಾಳೆ.ಆತ ಹೇಗೆ ನಾಯಕಿಯ ಸಾವಿಗೆ ಕಾರಣನಾದ, ಮತ್ತೊಬ್ಬ ಹೆಣ್ಣು ಹೇಗೆ ಆತನಿಗೆ ಶಾಪವಾಗಿ ಅನುಭೌವಿಸುತ್ತಾನೆ ಎನ್ನುವುದೇ ಈ ಚಿತ್ರದ ಕಥಾಹಂದರ.
ಸ್ವಾತಿ ಅಂಬರೀಶ್ ಚಿತ್ರದ ಕಥೆ, ಚಿತ್ರಕಥೆ ಸಂಭಾಷಣೆ ಬರೆದಿದ್ದು, ಅನಂತ್ ಆರ್ಯನ್, ಸತೀಶ್ ಬಾಬು ಸಂಗೀತ ಸಂಯೋಜಿಸಿದ್ದಾರೆ. ಪವನ್, ರವಿ ಅವರ ಕ್ಯಾಮೆರಾ ವರ್ಕ್, ಕವಿತಾ ಬಂಡಾರಿ ಅವರ ಸಂಕಲನ, ಜಗ್ಗು ಮಾಸ್ಟರ್ ನೃತ್ಯ, ಕೌರವ್ ವೆಂಕಟೇಶ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಮಹೇಶ್, ರಾಜ್ ಪ್ರಭು, ಅಮೃತ ಗೌಡ, ಅಂಜಲಿದೇವ್, ಕೆಂಪೇಗೌಡ, ಕಾವ್ಯಗೌಡ, ಅಂಬುಜಾಕಾಶಿ, ತೇಜು, ಅಯ್ಯಪ್ಪ ಪ್ರಮುಖ ತಾರಾಗಣದಲ್ಲಿದ್ದಾರೆ