ಅಮೇಜಾನ್​ ಪ್ರೈಮ್​ನಲ್ಲಿ ಮಮ್ಮೂಟ್ಟಿ ಅಭಿನಯದ ಕನ್ನಡದ `ಶೈಲಾಕ್`
Posted date: 28 Wed, Sep 2022 08:45:59 AM
ಮಲಯಾಳಂನ ಸೂಪರ್​ಸ್ಟಾರ್​ ಮಮ್ಮೂಟ್ಟಿ ಅಭಿನಯದ `ಶೈಲಾಕ್` ಚಿತ್ರವು ಇತ್ತೀಚೆಗಷ್ಟೇ ಕೇರಳದಲ್ಲಿ ಬಿಡುಗಡೆಯಾಗಿ ಜಯಭೇರಿ ಬಾರಿಸಿದೆ. ಈಗ ಈ ಚಿತ್ರವು ಕನ್ನಡಕ್ಕೆ ಡಬ್​ ಆಗಿರುವುದಷ್ಟೇ ಅಲ್ಲ, ಆ ಕನ್ನಡ ಅವತರಣಿಕೆಯು ಅಮೇಜಾನ್​ ಪ್ರೈಮ್​ನಲ್ಲಿ ಲಭ್ಯವಿದೆ. 
ಗುಡ್​ವಿಲ್​ ಎಂಟರ್​ಟೈನ್​ಮೆಂಟ್ಸ್​ನಡಿ ಜೋಬಿ ಜಾರ್ಜ್​ ನಿರ್ಮಿಸಿ, ಅಜಯ್​ ವಾಸುದೇವ್ ನಿರ್ದೇಶಿಸಿರುವ  `ಶೈಲಾಕ್​` ಚಿತ್ರವು ಕೇರಳದಲ್ಲಿ 80 ಕೋಟಿ ರೂ.ಗಳಳೀಗೂ ಹೆಚ್ಚು ಗಳಿಕೆ ಮಾಡಿ ಬ್ಲಾಕ್​ಬಸ್ಟರ್​ ಎಂದನಿಸಿಕೊಂಡಿತ್ತು. ಈ ಚಿತ್ರವು ತೆಲುಗು ಮತ್ತು ತಮಿಳಿಗೆ ಡಬ್​ ಆಗಿ ಆಹಾ ಓಟಿಟಿಯಲ್ಲಿ ಸ್ಟ್ರೀಮ್​ ಆಗುತ್ತಿದೆ. ಇದೀಗ ಚಿತ್ರವು ಕನ್ನಡಕ್ಕೆ ಡಬ್​ ಆಗಿದ್ದು, ಅಮೇಜಾನ್​ ಪ್ರೈಮ್​ನಲ್ಲಿ ನೋಡಬಹುದಾಗಿದೆ. 
 
ಇದೊಂದು ಆಕ್ಷನ್​ ಥ್ರಿಲ್ಲರ್​ ಚಿತ್ರವಾಗಿದ್ದು, ಮಮ್ಮೂಟ್ಟಿ ಅವರು ಬಾಸ್ ಎಂಬ ಫೈನಾನ್ಶಿಯರ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ಜಾನರ್​ಗಳಿಗೆ ಸಲ್ಲುವ ಚಿತ್ರ ಇದ್ದಾಗಿದ್ದು, ಮೊದಲು ಕಾಮಿಡಿಯಿಂದ ಪ್ರಾರಂಭವಾಗಿ, ಥ್ರಿಲ್ಲರ್​ ಆಗಿ ಮುಂದುವರೆದು, ಸೇಡಿನ ಕಥೆಯಾಗಿ ಮುಗಿಯುತ್ತದೆ. ಪಕ್ಕಾ ಮಾಸ್​ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಚಿತ್ರ ಬಿಡುಗಡೆಯಾದ ಕಡೆಯೆಲ್ಲ ಮೆಚ್ಚುಗೆಗೆ ಪಾತ್ರವಾಗಿದೆ.
 
`ಶೈಲಾಕ್​`ಚಿತ್ರದಲ್ಲಿ ಮಮ್ಮೂಟ್ಟಿ ಜತೆಗೆ ರಾಜ್​ಕಿರಣ್​, ಮೀನಾ, ಸಿದ್ದೀಖ್​, ಬಿಬಿನ್​ ಜಾರ್ಜ್​, ಬೈಜು ಸಂತೋಷ್​, ಕಲಾಭವನ್​ ಶಾಜೋನ್​ ಮುಂತಾದವರು ನಟಿಸಿದ್ದು, ಗೋಪಿಸುಂದರ್​ ಸಂಗೀತ ಸಂಯೋಜಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed