ಡಾರ್ಲಿಂಗ್ ಕೃಷ್ಣ ಬಿಡುಗಡೆ ಮಾಡಿದರು ``ಯಾರಿಗೆ ಬೇಕು ಈ ಲೋಕ`` ಚಿತ್ರದ ಫಸ್ಟ್ ಲುಕ್
Posted date: 18 Thu, Nov 2021 11:07:32 AM
ಆರ್ಯವರ್ಧನ್ ನಾಯಕರಾಗಿ ಅಭಿನಯಿಸುತ್ತಿರುವ "ಯಾರಿಗೆ ಬೇಕು ಈ ಲೋಕ" ಚಿತ್ರದ ಫಸ್ಟ್ ಲುಕ್ ಪೋಸ್ಟರನ್ನು ನಟ ಡಾರ್ಲಿಂಗ್ ಕೃಷ್ಣ ಬಿಡುಗಡೆ ಮಾಡಿ ಶುಭ ಕೋರಿದರು.
 
ಈ ಚಿತ್ರದ ಫಸ್ಟ್ ಲುಕನ್ನು ಚಿತ್ರತಂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಸಮರ್ಪಿಸಿದೆ.
 ಆರ್ಯವರ್ಧನ್ ಅವರಿಗೆ ನಾಯಕಿಯರಾಗಿ‌ ಪ್ರಿಯಾಂಕ ರಿವಾರಿ, ಪಾವನಿ ಹಾಗೂ ವರ್ಷ ನಟಿಸುತ್ತಿದ್ದಾರೆ. 

ಹಿರಿಯ ನಟ ವಿನೋದ್ ಕುಮಾರ್, ರಚ ರವಿ, ರಾಮು(ಜ್ಯೂನಿಯರ್ ರಾಜಕುಮಾರ್), ಶೋಭನ್ ಅಕ್ಷರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. 

ಎಂ.ರಮೇಶ್‌ ಹಾಗೂ ಗೋಪಿ ಜಂಟಿಯಾಗಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಬಿ.ಶ್ರೀನಿವಾಸ ರಾವ್ ಹಾಗೂ ರೋಶಿನಿ ನೌಡಿಯಲ್ ನಿರ್ಮಿಸುತ್ತಿದ್ದಾರೆ. 

ಮಹಿತ್ ನಾರಾಯಣ್ ಸಂಗೀತ ನೀಡಿರುವ ಈ ಚಿತ್ರಕ್ಕೆ ಶ್ರೀ ವಸಂತ್ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಎ.ಕೆ.ಆನಂದ್ ಛಾಯಾಗ್ರಹಣ, ಶ್ರೀನಿವಾಸ್ ಪಿ ಬಾಬು ಸಂಕಲನ ಹಾಗೂ ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ "ಯಾರಿಗೆ ಬೇಕು ಈ ಲೋಕ" ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed