ಗೋವಾದಲ್ಲಿ ರಾಜಧಾನಿ ಹಾಡು
Posted date: 14/April/2010

ಐವರು ನಿರುದ್ಯೋಗಿ ಯುವಕರು ತಮ್ಮ ಜೀವನವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಯಾವರೀತಿ ಹಾದಿತಪ್ಪುತ್ತಾರೆ ಎಂಬ ಕಥೆಯನ್ನು ಹೊಂದಿರುವ ರಾಜಧಾನಿ ಎಂಬ ಚಿತ್ರಕ್ಕೆ ರಘುಜಯ ಎಂಬ ಯುವಕ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಪ್ರಾರಂಭವಾದ ಈ ಚಿತ್ರದ ಚಿತ್ರೀಕರಣದಲ್ಲಿ ಬೆಂಗಳೂರಿನ ಸುತ್ತಮುತ್ತ ಹಲವಾರು ಸಾಹಸ, ಕೌಟುಂಬಿಕ ಹಾಗೂ ಪ್ರೇಮ-ಪ್ರೀತಿಯ ದೃಷ್ಯಗಳನ್ನು ಸೆರೆಹಿಡಿಯಲಾಯಿತು. ಈಗ ಚಿತ್ರತಂಡ ಗೋವಾದ ರಮ್ಯ ತಾಣಗಳಲ್ಲಿ ಡ್ಯುಯಟ್ ಹಾಡೊಂದರ ಚಿತ್ರೀಕರಣ ಮಾಡುವಲ್ಲಿ ನಿರಂತರವಾಗಿದೆ. ಶ್ರೀದೇವೀರಮ್ಮ ಎಂಟರ್ ಪ್ರೈಸಸ್ ಲಾಂಛನದಲ್ಲಿ ಎನ್.ಆರ್. ಸೌಮ್ಯಸತ್ಯನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಹೆಚ್.ಸಿ. ವೇಣುರ ಛಾಯಾಗ್ರಹಣ, ಅರ್ಜುನರ ಸಂಗೀತ, ಕೆ.ವಿ. ರಾಜು ಸಂಭಾಷಣೆ, ರವಿವರ್ಮ-ಡ್ಯಾನಿ ಸಾಹಸ ಇದ್ದು, ಯಶ್, ಚೇತನ ಚಂದ್ರ, ಸತ್ಯ, ಸಂದೀಪ್ ಹಾಗೂ ರವಿತೇಜ ೫ ಜನ ನಾಯಕರಾಗಿದ್ದು, ನಟಿ ಸಾಧನಾ ಸಿಂಗ್‌ರ ಪುತ್ರಿ ಷೀನಾ ಷಹಬಾದಿ ನಾಯಕಿಯಾಗಿದ್ದಾರೆ. ನಟ ಪ್ರಕಾಶ್ ರೈ ಇನ್ಸ್‌ಪೆಕ್ಟರ್ ಪಾತ್ರ ನಿರ್ವಹಿಸಿದ್ದಾರೆ. ಉಮಾಶ್ರೀ, ರಾಜು ತಾಳೀಕೋಟೆ, ರಮೇಶ್‌ಭಟ್, ಅರುಣಸಾಗರ ಇತರ ಪಾತ್ರವರ್ಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed