ವಿಂಡೋಸೀಟ್ ಸೈಕಾಲಜಿಕಲ್ ಥ್ರಿಲ್ಲರ್ -3/5 ***
Posted date: 03 Sun, Jul 2022 12:00:33 PM
ಪ್ರತಿಯೊಬ್ಬರಲ್ಲೂ ಒಂದು ಹುಡುಕಾಟ ಇದ್ದೇ ಇರುತ್ತದೆ. ಒಂದು ಹೊರಗಡೆ, ಮತ್ತೋಂದು ಒಳಗಡೆ. ಕಥಾನಾಯಕ ಪರಿಸರ ಪ್ರಿಯ ಹಾಗೂ ಸಂಗೀತ ಪ್ರೇಮಿ. ಮುಂಬೈನಿಂದ ಬಂದು ಮಲೆನಾಡಿನ ಸುಂದರ ತಾಣದಲ್ಲಿ ನೆಲೆಸಿರುತ್ತಾನೆ. ನೀರು, ಮಳೆ, ರೈಲು, ಹನಿ ಉಳಿದಿರುವ ಎಲೆಗಳು, ಕೆಸರು ತುಂಬಿದ ರಸ್ತೆಗಳು ಎಲ್ಲವನ್ನು ಮನಸಾರೆ ಆಹ್ವಾದಿಸುತ್ತಾ ಜೀವಿಸುವ ಅವನ ಜೀವನದ ಅರ್ಥ ತಿಳಿದಾಗ ಸಿನಿಮಾವು ಬೇರೊಂದು ದಾರಿಗೆ ಸಾಗುವುದೇ ಚಿತ್ರದ ತಿರುಳು. ರೈಲಿನಲ್ಲಿ ಪ್ರಯಾಣ ಮಾಡುವಾಗ ವಿಂಡೋ ಸೀಟ್‌ನ್ನೆ ಆಯ್ಕೆ ಮಾಡಿಕೊಳ್ಳುತ್ತಾನೆ. ಅಲ್ಲಿಂದ ಕಾಣುವ ಮನದಾಕೆಯನ್ನು ನೋಡುತ್ತಾ ಖುಷಿ ಪಡುತ್ತಾನೆ. ಅವಳ ಮೇಲೆ ಪ್ರೀತಿ ಹುಟ್ಟುತ್ತದೆ. ಆದರೆ ಅವನ ಗೆಳತಿಗೆ ಇದರಿಂದ ಹೊಟ್ಟೆಕಿಚ್ಚು ಶುರುವಾಗುತ್ತದೆ. ಇಲ್ಲೊಂದು ಮುಗ್ದ ಪ್ರೀತಿಕತೆ ಇದೆ. ನಿಗೂಡತೆಗೆ ಒಬ್ಬ ಮೇಷ್ಟ್ರು ಇದ್ದಾರೆ. ಇದನ್ನು ಹೇಳುವುದಕ್ಕೆ ಸಮರ್ಥವಾದ ಕಲಾವಿದರು ಸೇರಿಕೊಂಡಿದ್ದಾರೆ. ವಿರಾಮದ ನಂತರ ಥ್ರಿಲ್ಲರ್ ಅಂಶಗಳತ್ತ ಹೊರಳುತ್ತದೆ. ಕೊನೆವರೆಗೂ ಏನಾಗುತ್ತದೆ. ಅಲ್ಲಿ ನಡೆಯುತ್ತಿರುವ ಘಟನೆಗಳಿಗೆ ಕಾರಣ ಯಾರು ಎಂಬ ಕುತೂಹಲದಲ್ಲಿ ಚಿತ್ರವು ಸಾಗುತ್ತದೆ.

ನಾಯಕ ನಿರೂಪ್‌ಭಂಡಾರಿ, ನಾಯಕಿಯರಾದ ಅಮೃತಅಯ್ಯಂಗಾರ್ ಮತ್ತು ಸಂಜನಾ ಚಿತ್ರದ ಭಾಗವೇ ಆಗಿದ್ದಾರೆ. ಅವರ ಪಾತ್ರವನ್ನು ನೋಡುತ್ತಿದ್ದರೆ ಬೇರೆಯವರನ್ನು ಯೋಚಿಸಲಿಕ್ಕೂ ಅವಕಾಶ ಮಾಡಿಕೊಟ್ಟಿಲ್ಲ. ರವಿಶಂಕರ್ ಪಾತ್ರವು ಗಮನ ಸೆಳೆಯುತ್ತದೆ. ನವಪ್ರತಿಭೆ ಲೇಖಾನಾಯ್ಡು ಪೋಲೀಸ್ ಅಧಿಕಾರಿಯಾಗಿ ನೋಡುಗರನ್ನು ಅಚ್ಚರಿಯಲ್ಲಿ ಮುಳುಗಿಸುತ್ತಾರೆ. ಮೊದಲಬಾರಿ ಆಕ್ಷನ್ ಕಟ್ ಹೇಳಿರುವ ಶೀತಲ್‌ಶೆಟ್ಟಿ ಚಿತ್ರರಂಗಕ್ಕೆ ಭರವಸೆಯ ನಿರ್ದೇಶಕಿ ಎಂದು ಗುರುತಿಸಿಕೊಂಡಿದ್ದಾರೆ. ವಿಘ್ನೇಶ್‌ರಾಜ್ ಛಾಯಾಗ್ರಹಣ ಕಣ್ಣಿಗೆ ತಂಪು ಕೊಡುತ್ತದೆ. ಚಿತ್ರವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ. 
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed