ಸದ್ಯದಲ್ಲೇ ಶುರುವಾಗಲಿದೆ ``ಜೇಡರಬಲೆ``
Posted date: 30 Tue, Aug 2022 12:55:30 PM
ಸಸ್ಪೆನ್ಸ್ ಕಥಾಹಂದರದ ಈ ಚಿತ್ರಕ್ಕೆ  ಡಾ||ರಾಜ್ ಅಭಿನಯದ ಸೂಪರ್ ಹಿಟ್ ಚಿತ್ರದ ಶೀರ್ಷಿಕೆ. 

ಖ್ಯಾತ ನಿರ್ದೇಶಕರಾದ ದೊರೆ - ಭಗವಾನ್ ನಿರ್ದೇಶನದಲ್ಲಿ, ನಟ ಸಾರ್ವಭೌಮ ಡಾ||ರಾಜಕುಮಾರ್ ಹಾಗೂ ಜಯಂತಿ ಅವರ ಅಭಿನಯದಲ್ಲಿ ಮೂಡಿಬಂದಿದ್ದ ಜನಪ್ರಿಯ ಚಿತ್ರ "ಜೇಡರ ಬಲೆ". 

 ಐವತ್ತನಾಲ್ಕು ವರ್ಷಗಳ ನಂತರ ಮತ್ತೆ ಇದೇ ಹೆಸರಿನ ಚಿತ್ರವೊಂದು ಸದ್ಯದಲ್ಲೇ ಆರಂಭವಾಗಲಿದೆ.

ಕನ್ನಡ ಚಿತ್ರರಂಗದೊಂದಿಗೆ ಹಲವು  ವರ್ಷಗಳ ನಂಟನ್ನು ಹೊಂದಿರುವ ಯುವ ಉದ್ಯಮಿ ವಿಕಾಸ್ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.  ಸಿದ್ವಿಕ್ ಪ್ರೊಡಕ್ಷನ್ ಎಂಬ ನೂತನ ನಿರ್ಮಾಣ ಸಂಸ್ಥೆಯ ಲಾಂಛನದಲ್ಲಿ " ಜೇಡರಬಲೆ" ಸಿದ್ದವಾಗಲಿದೆ.

 "ಮಂಗಳವಾರ ರಜಾದಿನ"  ಚಿತ್ರ ನಿರ್ದೇಶಿಸಿದ್ದ ಯುವಿನ್, ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 

ನಾನು ಅಣ್ಣವ್ರ ಅಭಿಮಾನಿ. ಅವರ ಚಿತ್ರಗಳೆಂದರೆ ನನಗೆ ಪ್ರಾಣ. ನಮ್ಮ ಚಿತ್ರ ಕೂಡ ಸಸ್ಪೆನ್ಸ್ ಕಥಾಹಂದರ ಹೊಂದಿರುವುದರಿಂದ "ಜೇಡರಬಲೆ" ಎಂಬ ಶೀರ್ಷಿಕೆಯಿಟ್ಟಿದ್ದೀನಿ.
ಮುಂದಿನ ತಿಂಗಳಿನಿಂದ  ಚಿತ್ರೀಕರಣ ಆರಂಭಿಸುತ್ತೇವೆ ಎಂದು     ನಿರ್ಮಾಪಕ ವಿಕಾಸ್ ಗೌಡ ತಿಳಿಸಿದ್ದಾರೆ.

ಈಗ ಚಿತ್ರದ ಶೀರ್ಷಿಕೆ ಅನಾವಾರಣವಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರಗಳನ್ನು ನೀಡಲಾಗುವುದು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed