ಸೆಟ್ಟೇರಿತು ರಾಜವರ್ಧನ್ ನಾಲ್ಕನೇ ಚಿತ್ರ -`ಗಜರಾಮ`ನಿಗೆ ಕ್ಲ್ಯಾಪ್ ಮಾಡಿದ ಜೂನಿಯರ್ ರೆಬೆಲ್ ಸ್ಟಾರ್
Posted date: 29 Thu, Sep 2022 08:49:09 AM
`ಮ್ಯಾಸಿವ್ ಸ್ಟಾರ್` ರಾಜವರ್ಧನ್ ಬಿಚ್ಚುಗತ್ತಿ ಸಿನಿಮಾ ನಂತರ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಯಕ‌ ನಟನಾಗಿ ಅಭಿನಯಿಸುತ್ತಿರುವ ಪ್ರಣಯಂ, ಹಿರಣ್ಯ ಸಿನಿಮಾ ಬಿಡುಗಡೆಗೆ ಮೊದಲೇ ಮಾಸ್ ಸಬ್ಜೆಕ್ಟ್ ಸಿನಿಮಾವೊಂದು ರಾಜವರ್ಧನ್ ಬತ್ತಳಿಕೆ ಸೇರಿದೆ.  ಅದುವೇ `ಗಜರಾಮ`. ಫಸ್ಟ್ ಲುಕ್ ಪೋಸ್ಟರ್ ಮೂಲಕ ಕಿಕ್ ಕೊಟ್ಟ  ಈ ಚಿತ್ರದ ಮುಹೂರ್ತ ಇಂದು ನೆರವೇರಿದೆ. 

ನಿರ್ದೇಶಕ ಸುನೀಲ್ ಕುಮಾರ್ ವಿ.ಎ ಹೆಣೆದ ಕಥೆ ಕೇಳಿ ಇಂಪ್ರೆಸ್ ಆಗಿರುವ ರಾಜವರ್ಧನ್  `ಗಜರಾಮ`ನಾಗಿ ಅಬ್ಬರಿಸಲು  ಗ್ರೀನ್ ಸಿಗ್ನಲ್ ಕೊಟ್ಟಿದ್ದು  ಇಂದು ಚಿತ್ರದ ಮುಹೂರ್ತ ನೇರವೇರಿದೆ. ಚಿತ್ರಕ್ಕೆ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಕ್ಲ್ಯಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.

ಚಿತ್ರಕ್ಕೆ ಕ್ಲ್ಯಾಪ್ ಮಾಡಿ ಮಾತನಾಡಿದ ಅಭಿಷೇಕ್  ಅಂಬರೀಶ್  ನಮ್ಮ ತಂದೆ ಗಜೇಂದ್ರ ಎನ್ನುವ ಸಿನಿಮಾ ಮಾಡಿದ್ರು ಈಗ ನನ್ನ ಸ್ನೇಹಿತ ಗಜರಾಮ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರಾಜವರ್ಧನ್ ಮೋಷನ್ ಪೋಸ್ಟರ್ ನಲ್ಲಿ ತುಂಬಾ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ. 

ಒಂದೊಳ್ಳೆ ಫ್ಯಾಮಿಲಿ ಎಂಟಟೈನ್ಮೆಂಟ್ ಹಾಗೂ ಮಾಸ್ ಕಟೆಂಟ್ ಒಳಗೊಂಡ ಒಂದೊಳ್ಳೆ ಕಥೆ ಚಿತ್ರದಲ್ಲಿದೆ.  ನನ್ನ ಪಾತ್ರದ ಬಗ್ಗೆ ಕೇಳಿ ಇಷ್ಟವಾಯ್ತು. ಒಳ್ಳೆ ಪ್ರೊಡಕ್ಷನ್ ಹೌಸ್, ಒಳ್ಳೆ ನಿರ್ಮಾಪಕರು, ಒಳ್ಳೆ ಚಿತ್ರ ಸಿಕ್ಕಾಗ ಕೈ ಬಿಡಬಾರದು. ನನಗೆ ಸ್ಟೋರಿ ಲೈನ್ ಪರ್ಸನಲಿ ಖುಷಿ ಕೊಟ್ಟಿದೆ ಎಂದು ನಾಯಕ ರಾಜವರ್ಧನ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. 

ಚಿತ್ರದಲ್ಲಿ ರಾಜವರ್ಧನ್ ಗೆ  ನಾಯಕಿಯಾಗಿ ಕೊಡಗಿನ ಬೆಡಗಿ ತಪಸ್ವಿನಿ ಪೂಣಚ್ಚ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹರಿಕಥೆ ಅಲ್ಲ ಗಿರಿಕಥೆ  ನಂತರ ಇವರು ನಟಿಸುತ್ತಿರುವ ಎರಡನೇ ಸಿನಿಮಾವಿದು.

ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕನಾಗಿ ಹಲವು ವರ್ಷಗಳ ಕಾಲ ದುಡಿದು ಅನುಭವವಿರುವ  ಸುನೀಲ್ ಕುಮಾರ್ `ಗಜರಾಮ` ಸಿನಿಮಾ ಮೂಲಕ  ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ.  
 
ರಾಜವರ್ಧನ್ ಗಾಗಿ  ಆಕ್ಷನ್, ಮಾಸ್ ಎಂಟಟೈನರ್ ಕಥೆ ಹೆಣೆದಿರೋ ನಿರ್ದೇಶಕರು ಸಾಕಷ್ಟು ತಯಾರಿಯೊಂದಿಗೆ ನಾಳೆಯಿಂದ ಚಿತ್ರೀಕರಣಕ್ಕೆ ಹೊರಡುತ್ತಿದ್ದಾರೆ. ನಟ ದೀಪಕ್ ಪ್ರಿನ್ಸ್ ಈ ಚಿತ್ರದ ಸ್ಪೆಷಲ್ ರೋಲ್ ಒಂದರಲ್ಲಿ ಬಣ್ಣ ಹಚ್ಚುತ್ತಿರೋದು ಈ ಚಿತ್ರದ ಸ್ಪೆಷಲ್ ಸಂಗತಿಗಳಲ್ಲೊಂದು. 
 
ಮೆಲೋಡಿ ಹಾಡುಗಳ ಮಾಂತ್ರಿಕ ಮನೋಮೂರ್ತಿ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.  ಕೆ.ಎಸ್.ಚಂದ್ರಶೇಖರ್ ಛಾಯಾಗ್ರಾಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಸಾಹಿತ್ಯವಿದೆ. ಲೈಫ್ ಲೈನ್ ಫಿಲ್ಮಂ ಪ್ರೊಡಕ್ಷನ್ ನಡಿ ನರಸಿಂಹ ಮೂರ್ತಿ ಚಿತ್ರವನ್ನು ನಿರ್ಮಾಣ ಮಾಡ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed