ಅದೊಂದಿತ್ತು ಕಾಲಕ್ಲೈಮ್ಯಾಕ್ಸ್ ಬಾಕಿ
Posted date: 18 Mon, Oct 2021 09:55:15 AM
ಭುವನ್ ಸಿನಿಮಾಸ್ ಲಾಂಛನದಡಿಯಲ್ಲಿ ನಿರ್ಮಾಪಕರಾದ ಸುರೇಶ್ ಹಾಗೂ ಎನ್. ಲೋಕೇಶ್ ನಿರ್ಮಿಸುತ್ತಿರುವ ಅಂದೊಂದಿತ್ತು ಕಾಲ ಚಿತ್ರಕ್ಕಾಗಿ ಇತ್ತೀಚೆಗೆ 17 ದಿವಸಗಳ ಕಾಲ ತೀರ್ಥಹಳ್ಳಿಯಲ್ಲಿ ಚಿತ್ರೀಕರಣ ನಡೆಯಿತು.

ರಘು ನೃತ್ಯ ನಿರ್ದೇಶನದಲ್ಲಿ ೩ ಗೀತೆಗಳನ್ನು ಹಾಗೂ ಹಲವಾರು ಸನ್ನಿವೇಶಗಳನ್ನು ವಿನಯ್‌ರಾಜ್‌ಕುಮಾರ್, ಅದಿತಿಪ್ರಭು, ಅಮೂಲ್ಯರ ಮೇಲೆ ತೀರ್ಥಹಳ್ಳಿಯ ಸುತ್ತ ಮುತ್ತ ಅಭಿಷೇಕ್‌ ಕಾಸರಗೋಡು ಛಾಯಾಗ್ರಹಣದಲ್ಲಿ ನಿರ್ದೇಶಕ ಕೀರ್ತಿ ಚಿತ್ರಿಸಿಕೊಂಡರು.
ಚಿತ್ರದ ಕ್ಲೈಮ್ಯಾಕ್ಸ್ ಸನ್ನಿವೇಶವನ್ನು ಸದ್ಯದಲ್ಲೇ ಚಿತ್ರಿಸಿಕೊಳ್ಳಲಾಗುವುದು ಎಂದು ತಿಳಿಸಿರುವ ನಿರ್ಮಾಪಕ ಸುರೇಶ್ ಫೆಬ್ರವರಿಯಲ್ಲಿ ಚಿತ್ರವು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ತಿಳಿಸಿದ್ದಾರೆ. 
 
ಚಿತ್ರಕ್ಕೆ ಅರಸುಅಂತಾರೆ, ಸಂತೋಷ್ ಮುಂದಿನಮನೆ ಸಂಭಾಷಣೆ, ನಾಗೇಂದ್ರ ಪ್ರಸಾದ್ ಸಾಹಿತ್ಯ ಅಭಿಷೇಕ್‌ ಕಾಸರಗೋಡು ಛಾಯಾಗ್ರಹಣ, ವಿ. ರಾಘವೇಂದ್ರ ಸಂಗೀತ, ಎ.ಆರ್.ಕೃಷ್ಣ ಸಂಕಲನ, ಆರ್.ಜೆ.ರಘು ನೃತ್ಯ, ಅನಿಲ್ ನಿರ್ಮಾಣ ನಿರ್ವಹಣೆಯಿದ್ದು, ಚಿತ್ರವನ್ನು ಹಲವಾರು ಯಶಸ್ವಿ ಚಿತ್ರಗಳ ನಿರ್ದೇಶಕರ ಜೊತೆ ಕೆಲಸ ಮಾಡಿದ ಕೀರ್ತಿ ಈ ಚಿತ್ರ ನಿರ್ದೇಶಿಸುವುದರ ಮೂಲಕ ಚಿತ್ರರಂಗ ಪ್ರವೇಶಿಸಲಿದ್ದಾರೆ. 

ತಾರಾಗಣದಲ್ಲಿ ವಿನಯ್‌ ರಾಜ್‌ಕುಮಾರ್, ಅದಿತಿ ಪ್ರಭುದೇವ, ನಿಶಾಮಿಲನ, ಅರುಣ ಬಾಲರಾಜ್ ಮೋಹನ್‌ಜುನೇಜಾ, ಕಡ್ಡಿ ಪುಡಿಚಂದ್ರು, ಮಜಾ ಭಾರತ್‌ ಜಗ್ಗಪ್ಪ, ಧರ್ಮೆಂದ್ರ ಅರಸ್, ಹಿರಿಯ ಸಾಹಿತಿ  ಪ್ರೊ. ದೊಡ್ಡರಂಗೇಗೌಡ, ಗೋವಿಂದೇಗೌಡ ಮುಂತಾದವರಿದ್ದು, ಹೆಸರಾಂತ ನಟರೊಬ್ಬರು ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed