ಸೆಪ್ಟೆಂಬರ್ 5 ರಂದು ಬರಲಿದೆ ಬಹು ನಿರೀಕ್ಷಿತ ``ಕಾಂತಾರ``ಚಿತ್ರದ ಟ್ರೇಲರ್
Posted date: 01 Thu, Sep 2022 09:13:14 PM
ಭಾರತ ಚಿತ್ರರಂಗಕ್ಕೆ "ಕೆ.ಜಿ.ಎಫ್" ಎಂಬ ಅತ್ಯುತ್ತಮ ಚಿತ್ರ ನೀಡಿರುವ  ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರು ಅವರು ನಿರ್ಮಿಸಿರುವ ಹಾಗೂ ರಿಷಬ್ ಶೆಟ್ಟಿ ನಾಯಕರಾಗಿ ನಟಿಸಿ, ನಿರ್ದೇಶಿಸಿರುವ "ಕಾಂತಾರ" ಚಿತ್ರದ ಟ್ರೇಲರ್ ಸೆಪ್ಟೆಂಬರ್ 5 ರ ಶಿಕ್ಷಕರ ದಿನಾಚರಣೆಯ ಶುಭದಿನದಂದು ಬಿಡುಗಡೆಯಾಗಲಿದೆ.  

ಈಗಾಗಲೇ ಹಲವು ವಿಶೇಷಗಳಿಂದ "ಕಾಂತಾರ" ಮನೆಮಾತಾಗಿದೆ. ಇತ್ತೀಚಿಗೆ ಬಿಡುಗಡೆಯಾದ ಕರುನಾಡ ಸಂಸ್ಕ್ರತಿಯನ್ನು ಬಿಂಬಿಸುವ ಅಜನೀಶ್ ಲೋಕನಾಥ್ ಸಂಗೀತ ನೀಡಿರುವ, ವಿಜಯಪ್ರಕಾಶ್, ಅನನ್ಯ ಭಟ್ ಹಾಡಿರುವ "ಸಿಂಗಾರ ಸಿರಿಯೆ" ಹಾಡಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮುಂದೆ ಬಿಡುಗಡೆಯಾಗಲಿರುವ ಟ್ರೇಲರ್ ಹಾಗೂ ಚಿತ್ರಕ್ಕಾಗಿ ಕಲಾರಸಿಕರು ಕಾತುರದಿಂದ ಕಾಯುತ್ತಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed