ಮೈಸೂರಿನಲ್ಲಿ ``ಹೊಯ್ಸಳ``
Posted date: 05 Tue, Jul 2022 09:39:02 AM
ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ನಟ  ಡಾಲಿ ಧನಂಜಯ. ಪ್ರಸ್ತುತ ಇವರು ನಾಯಕರಾಗಿ ನಟಿಸುತ್ತಿರುವ " ಹೊಯ್ಸಳ" ಚಿತ್ರದ ಚಿತ್ರೀಕರಣ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿದೆ.  

ಡಾಲಿ ಧನಂಜಯ ಈ ಚಿತ್ರದಲ್ಲಿ ಗುರುದೇವ ಹೊಯ್ಸಳ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಿಸುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ಈ ಚಿತ್ರನಿರ್ಮಾಣವಾಗುತ್ತಿದೆ.
 
ವಿಜಯ್ ನಾಗೇಂದ್ರ ``ಹೊಯ್ಸಳ``ಚಿತ್ರದ ನಿರ್ದೇಶಕರು.  ಈ ಹಿಂದೆ ಗಣೇಶ್ ಅಭಿನಯದ ``ಗೀತಾ`` ಚಿತ್ರವನ್ನು ವಿಜಯ್ ನಾಗೇಂದ್ರ ನಿರ್ದೇಶನ ಮಾಡಿದ್ದರು. 
 
ಅಜನೀಶ್ ಲೋಕನಾಥ್ ಆವರ  ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಇತ್ತೀಚೆಗೆ ನಾಯಕ ಧನಂಜಯ ಅವರ ``ಹೊಯ್ಸಳ`` ಚಿತ್ರದ ಫಸ್ಟ್ ಲುಕ್ ಸಹ ನಿರ್ಮಾಣ ಸಂಸ್ಥೆಯಾದ ಕೆ.ಆರ್.ಜಿ ಸ್ಟುಡಿಯೋಸ್ ನಿಂದ ಬಿಡುಗಡೆಯಾಗಿದೆ.
 
ಮೈಸೂರಿನ ಭಾಗದ ಚಿತ್ರೀಕರಣದಲ್ಲಿ ನಾಯಕ ಧನಂಜಯ, ನಾಯಕಿ ಅಮೃತ ಅಯ್ಯಂಗಾರ್, ಅಚ್ಯುತ್
ಕುಮಾರ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅವಿನಾಶ್ ಕೆ.ಜಿ.ಎಫ್, ರಾಘು ಶಿವಮೊಗ್ಗ ಮುಂತಾದ ಕಲಾವಿದರು ಭಾಗಿಯಾಗಿದ್ದಾರೆ.

 ಸಾಹಸ ನಿರ್ದೇಶಕರಾದ ದಿಲೀಪ್ ಸುಬ್ರಹ್ಮಣ್ಯ ಹಾಗೂ ಅರ್ಜುನ್ ಮಾಸ್ಟರ್ ಅವರ ಸಾಹಸ ಸಂಯೋಜನೆಯಲ್ಲಿ ಸಾಹಸ ಸನ್ನಿವೇಶಗಳ ಚಿತ್ರೀಕರಣ ನಡೆಯಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed