ಪುರುಷೋತ್ತಮನ ಸಾಹಸಕ್ಕೆ ಜೈ ಅಂದ ಪ್ರೇಕ್ಷಕ
Posted date: 14 Sat, May 2022 03:02:41 PM
ಬಿಡುಗಡೆಯಾದ ದಿನದಿಂದ ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ಸೆಳೆಯುತ್ತಿರುವ  ಕೌಟುಂಬಿಕ ಕಥಾಹಂದರ ಇರುವ ಚಿತ್ರ ಪುರುಷೋತ್ತಮ. ಈಗ ಜನಮನ್ನಣೆಯೊಂದಿಗೆ ಎರಡನೇ ವಾರಕ್ಕೆ ಕಾಲಿಟ್ಟಿರುವ  ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿ  ನಿರ್ಮಾಣ ಮಾಡಿದವರು ಎ.ವಿ.ರವಿ (ಜಿಮ್ ರವಿ). ಬಹಳ ವರ್ಷಗಳ ನಂತರ ಜಿಮ್ ರವಿ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ   ಎಲ್ಲರಿಗೂ ಅನ್ವಯವಾಗುವಂಥ ಸೋಷಿಯಲ್ ಎಲಿಮೆಂಟ್ ಇದೆ. ,ಸರಳ ಕಥೆಯೊಂದಕ್ಕೆ ಕೊಲೆಯ ಟಚ್ ಕೊಟ್ಟು ಪ್ರೇಕ್ಷಕರನ್ನು ಹಿಡಿದು ಕೂರಿಸಿದ್ದಾರೆ. ಜಿಮ್ ರವಿ ಒಬ್ಬ ಫ್ಯಾಮಿಲಿ‌ಮ್ಯಾನ್ ಆಗಿ ಉತ್ತಮ ಪ್ರತಿಭೆ ತೋರಿಸಿದ್ದಾರೆ. 
 
ಮಹಿಳೆಯರ ಮೇಲೆ ಪ್ರತಿನಿತ್ಯ  ನಡೆಯುತ್ತಿರುವ ಲೈಂಗಿಕ ಕಿರುಕುಳ, ಅತ್ಯಾಚಾರದ ಪ್ರಕರಣಗಳ ಕುರಿತಾದ ಕಥಾನಕ ಈ ಚಿತ್ರದಲ್ಲಿದೆ.
*ಕನ್ನಡದ ನುರಿತ ತಂತ್ರಜ್ಞರು, ಕಲಾವಿದರುಗಳನ್ನೇ ಇಟ್ಟುಕೊಂಡು ಜೊತೆಗೆ  ಹೊಸ ಕಲಾವಿದರಿಗೂ ಅವಕಾಶವನ್ನ ಕೊಟ್ಟಿದ್ದಾರೆ,  ಹೊಸ ಪ್ರತಿಭೆಗಳು ಈ ಸಿನಿಮಾದಲ್ಲಿ ಉತ್ತಮವಾಗಿ ಅಭಿನಯಿಸಿದ್ದಾರೆ, ಕುಪ್ಪಸ್ವಾಮಿ ಪಾತ್ರದ ಹರೀಶ್ ಎ.ವಿ. ಖಳನಟನಾಗಿ ಮಿಂಚಿದ್ದಾರೆ,
 
*ಶ್ರೀಧರ್ ಸ0ಭ್ರಮ್ ಅಚ್ಚುಕಟ್ಟಾಗಿ ಸಂಗೀತ ಸಂಯೋಜನೆ  ಮಾಡಿದ್ದಾರೆ, ನಿರ್ದೇಶಕರು  ಪ್ರಥಮ ಪ್ರಯತ್ನದಲ್ಲೇ  ಯಶಸ್ವಿಯಾಗಿದ್ದಾರೆ.‌ 
 
*ಇತ್ತೀಚೆಗೆ ಬಂದ  ಬಹುತೇಕ  ಚಿತ್ರಗಳು ಎರಡನೇ ವಾರ ಹೌಸ್ ಫುಲ್ ಆಗಿಲ್ಲ. ಆದರೆ ಈ ಚಿತ್ರಕ್ಕೆ ಈಗಲೂ ಒಳ್ಳೆಯ ಕಲೆಕ್ಷನ್ ಬರುತ್ತಿದೆ. ಆ ಎಲ್ಲಾ ಸಿನಿಮಾಗಳಿಗೆ ಹೋಲಿಸಿ ನೋಡಿದರೆ ಉತ್ತಮರಲ್ಲಿ ಉತ್ತಮ ಈ ಪುರುಷೋತ್ತಮ ಎನ್ನಬಹುದು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed