ಭರ್ಜರಿಯಾಗಿದೆ ``ಲಂಕಾಸುರ`` ನ ಟೈಟಲ್ ಟ್ರ್ಯಾಕ್.
Posted date: 25 Mon, Jul 2022 08:06:46 AM
ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸುವುದರೊಂದಿಗೆ, ನಿರ್ಮಾಣವನ್ನು ಮಾಡುತ್ತಿರುವ ಚಿತ್ರ ``ಲಂಕಾಸುರ``. ಇದು ಟೈಗರ್ ಟಾಕೀಸ್ ಸಂಸ್ಥೆಯ ಮೊದಲ ಚಿತ್ರವೂ ಹೌದು. ನಿಶಾ ವಿನೋದ್ ಪ್ರಭಾಕರ್ ಈ ಚಿತ್ರದ ನಿರ್ಮಾಪಕರು. ಪ್ರಮೋದ್ ಕುಮಾರ್ ನಿರ್ದೇಶಕರು.

``ಅಣ್ಣ ಗನ್ ಹಿಡ್ದು  ನಿಂತ ಅಂದ್ರೆ ಭಸ್ಮಾಸುರ.
ಲಾಂಗ್ ಹಿಡ್ದು  ನಡ್ಕೊಂಡು ಬಂದ್ರೆ ಲಂಕಾಸುರ.  
ಲಂಕಾಸುರ   ಲಂಕಾಸುರ  .. ಎಂಬ ಟೈಟಲ್ ಟ್ರ್ಯಾಕ್  A2 music ಮೂಲಕ ಬಿಡುಗಡೆಯಾಗಿದೆ.  ಸಾಕಷ್ಟು ಸಂಖ್ಯೆಯಲ್ಲಿ  ವೀಕ್ಷಣೆಯಾಗುತ್ತಿದೆ. ಚೇತನ್ ಕುಮಾರ್ ಬರೆದಿರುವ ಈ ಹಾಡನ್ನು ವಿಜೇತ್ ಕೃಷ್ಣ ಅವರೆ ಹಾಡಿದ್ದಾರೆ. ಜೋಯೆಲ್ ಶಾಸ್ತ್ರಿ ಗಿಟಾರ್ ನುಡಿಸಿದ್ದಾರೆ.  

ಮೋಹನ್ ಕುಮಾರ್ ನೃತ್ಯ ನಿರ್ದೇಶನ ಮಾಡಿರುವ ಈ ಹಾಡಿನಲ್ಲಿ ನಾಯಕ ವಿನೋದ್ ಪ್ರಭಾಕರ್ ಅಭಿನಯಿಸಿದ್ದಾರೆ.
ಹೆಚ್.ಎಂ.ಟಿ, ಟೊರಿನೊ ಫ್ಯಾಕ್ಟರಿ ಹಾಗೂ ಮಲ್ಲೇಶ್ವರಂ  ದೋಬಿ ಘಾಟ್ ನಲ್ಲಿ ನಿರ್ಮಿಸಲಾಗಿದ್ದ ಆರು ಅದ್ದೂರಿ ಸೆಟ್ ಗಳಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed