ದಿಗ್ವಿಜಯಕ್ಕೆ ಸೆನ್ಸಾರ್
Posted date: 30 Tue, May 2023 09:17:37 AM
ಅರವತ್ತಕ್ಕೂ ಹೆಚ್ಚು ಚಿತ್ರಗಳಿಗೆ ಸಂಕಲನಕಾರರಾಗಿ ಕೆಲಸ ಮಾಡಿರುವ ಹಾಗೂ ಸೀಯು, ಫ್ಲಾಪ್ ಡೈರೆಕ್ಟರ್, ಕರ್ತ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿರುವ  ದುರ್ಗಾ ಪಿ.ಎಸ್. ಅವರ ನಿರ್ದೇಶನದ ಮತ್ತೊಂದು ಚಿತ್ರ  ದಿಗ್ವಿಜಯ. ಒಬ್ಬ  ವರದಿಗಾರ ಮನಸು ಮಾಡಿದ್ರೆ ಸಮಾಜದ ಎಷ್ಟೇ ದೊಡ್ಡ ಸಮಸ್ಯೆಯನ್ನಾದರೂ  ಬಗೆಹರಿಸಬಹುದು ಎಂದು ಈ ಚಿತ್ರದಲ್ಲಿ ಹೇಳಲಾಗಿದೆ.  ವರದಿಗಾರನೊಬ್ಬ ಹುಚ್ಚನನ್ನು ಇಟ್ಟುಕೊಂಡು  ಕೇವಲ ಮೂರು ದಿನದಲ್ಲಿ  ರಾಜ್ಯದ ಎಲ್ಲಾ ರೈತರ ಸಾಲವನ್ನು  ಮನ್ನಾ  ಮಾಡಿಸುತ್ತಾನೆ. ಅದು ಹೇಗೆ ಎನ್ನುವುದೇ ಈ ಚಿತ್ರದ ಕಥೆ. ನಾಯಕನ ತಂದೆ ತಾಯಿ ಕೂಡ ರೈತರೇ ಆಗಿದ್ದು, ಅವರೂ  ಸಾಲಬಾಧೆಯಿಂದಲೇ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಬೆಳೆನಷ್ಠ ಅನುಭವಿಸಿ, ತಂದೆ ತಾಯಿ ವಿಷ ಸೇವಿಸಿದ ಶಾಕ್ ನಿಂದ ನಾಯಕನ ಗೆಳೆಯ ಹುಚ್ಚನಾಗಿರುತ್ತಾನೆ.

ಜೆ.ಪಿ. ಎಂಟರ್ ಟೈನ್ ಮೆಂಟ್  ನಿರ್ಮಾಣದ ಈ ಚಿತ್ರಕ್ಕೆ  ಸೆನ್ಸಾರ್ ಮಂಡಳಿಯಿಂದ ಯಾವುದೇ ಕಟ್ ಇಲ್ಲದ ಯು ಸರ್ಟಿಫಿಕೇಟ್ ದೊರೆತಿದೆ. ಗೋವಾ ಫಿಲಂ ಫೆಸ್ಟಿವಲ್ ನಲ್ಲಿ ಈ ಚಿತ್ರಕ್ಕೆ 2 ಅವಾರ್ಡ್ ಬಂದಿದೆ. ಜೂನ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ಈ  ಚಿತ್ರವನ್ನು  ಜಯಪ್ರಭು ಆರ್ ಲಿಂಗಾಯತ್. ಅರುಣ್ ಸುಕದರ್. ಹರೀಶ್ ಆರ್ ಸಿ.ಅವರು  ನಿರ್ಮಾಣ ಮಾಡಿದ್ದಾರೆ. ಕಥೆ- ಚಿತ್ರಕಥೆ-ಸಂಭಾಷಣೆ -ಸಾಹಿತ್ಯ - ಸಂಕಲನ  ಮತ್ತು ನಿರ್ದೇಶನ  ದುರ್ಗಾ ಪಿ. ಎಸ್. ಅವರದು. 
 
ಜಯಪ್ರಭು ಆತಗ. ಲಿಂಗಾಯತ್ ಚಿತ್ರದ ನಾಯಕನಾಗಿ ನಟಿಸಿದ್ದು  ಸ್ನೇಹ ನಾಯಕಿಪಾತ್ರ ನಿರ್ವಹಿಸಿದ್ದಾರೆ.  ಸುಚೇಂದ್ರ ಪ್ರಸಾದ್. ಪಟ್ರೆಬನಾಗರಾಜ್. ಹೊನ್ನವಳ್ಳಿ ಕೃಷ್ಣ. ಹೊನ್ನವಳ್ಳಿ ಶ್ರೀಕಾಂತ್. ಕಿಲ್ಲರ್ ವೆಂಕಟೇಶ್. ಶಿವಕುಮಾರ್ ಆರಾಧ್ಯ. ಮುಂತಾದವರು ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ. ಬೆಂಗಳೂರು, ಮಂಡ್ಯ, ಮಂಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ  ಚಿತ್ರಿಕರಣ ನೆಡೆಸಲಾಗಿದೆ. ಚಿತ್ರದಲ್ಲಿ 4 ಫೈಟ್ 5 ಹಾಡುಗಳಿದ್ದು ಹರ್ಷ  ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ವಿನಸ್ ಮೂರ್ತಿ. ಸಾಹಸ - ಸೂಪ್ಪರ್ ಸುಬ್ಬು. ಡ್ಯಾನ್ಸ್ ಮಾಸ್ಟರ್ ಜಗ್ಗು ಅವರದು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed