ಆಕಾಶದಲ್ಲಿರುವ ನಕ್ಷತ್ರಕ್ಕೆ `ಪುನೀತ್ ರಾಜ್ ಕುಮಾರ್` ಹೆಸರು - ವಿಕ್ರಮ್ ರವಿಚಂದ್ರನ್ ಸಹಯೋಗದಲ್ಲಿ ಬಿಗ್ ಲಿಟ್ಲ್ ಕಂಪನಿಯಿಂದ ಅಪ್ಪುಗೆ ಗೌರವ ಸಮರ್ಪಣೆ
Posted date: 20 Mon, Mar 2023 03:33:04 PM
ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ `ಬಿಗ್ ಲಿಟ್ಲ್` ಕಂಪನಿ ನಟ ವಿಕ್ರಮ್ ರವಿಚಂದ್ರನ್ ಅವರೊಂದಿಗೆ ಸೇರಿ  ವೀಡಿಯೋ ಗೌರವ ಸಲ್ಲಿಸಿದೆ. ವಿಕ್ರಮ್ ರವಿಚಂದ್ರನ್ ಪುನೀತ್ ರಾಜ್ ಕುಮಾರ್ ಗೆ ಗೌರವ ಸಲ್ಲಿಸುವ ವೀಡಿಯೋ ಬಿಡುಗಡೆ ಮಾಡಿ ಸಂತಸ ಹಂಚಿಕೊಂಡಿದ್ದಾರೆ. ನಮ್ಮ ಕಾಲದ ಅತ್ಯುತ್ತಮ ಸ್ಪೂರ್ತಿಗೆ ಒಂದು ಚಿಕ್ಕ ಗೌರವ ನೀಡುವ ಸಲುವಾಗಿ ಆಕಾಶದಲ್ಲಿರುವ ನಕ್ಷತ್ರವೊಂದಕ್ಕೆ ಪುನೀತ್ ರಾಜ್ ಕುಮಾರ್ ಹೆಸರಿಡಲು ಹೆಮ್ಮೆಯಾಗಿದೆ ಎಂದು ಬಿಗ್ ಲಿಟ್ಲ್ ಕಂಪನಿ ತಿಳಿಸಿದೆ. 

ವಿಕ್ರಮ್ ರವಿಚಂದ್ರನ್ ಮಾತನಾಡಿ ಪುನೀತ್ ರಾಜ್ ಕುಮಾರ್ ಅವರಿಗೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿ ತೊಡಗಿಸಿಕೊಳ್ಳಲು ನನಗೆ ತುಂಬಾ ಸಂತೋಷವಾಗುತ್ತೆ. ನಾನು ಚಿಕ್ಕಂದಿನಿಂದಲೂ ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದಿದ್ದೇನೆ. ಸಿನಿಮಾದ ಆಚೆಗಿನ ಅವರ ಜೀವನ ಜಗತ್ತಿಗೇ ಸ್ಪೂರ್ತಿ. ಅವರಿಗಾಗಿ ಮಾಡುತ್ತಿರುವ ಒಂದೊಳ್ಳೆ ಕೆಲಸದಲ್ಲಿ ನಾನು ಭಾಗಿಯಾಗಿರೋದು ನನಗೆ ತುಂಬಾ ಖುಷಿ ಕೊಟ್ಟಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ. 

ಬಿಗ್ ಲಿಟ್ಲ್ ಕಂಪನಿ ಸಂಸ್ಥಾಪಕಿ ಕಾವ್ಯ ಶಂಕರೇಗೌಡ ಮಾತನಾಡಿ ಪುನೀತ್ ರಾಜ್ ಕುಮಾರ್  ಎಲ್ಲರಿಗೂ ಸ್ಪೂರ್ತಿ. ಬಿಗ್ ಲಿಟ್ಲ್ ಕಂಪನಿ ಅವರಿಂದ ತುಂಬಾ ಕಲಿತಿದೆ. ವೈಯಕ್ತಿಕವಾಗಿ ಅವರು ನನಗೆ ಗೊತ್ತಿದ್ದಾರೆ, ನನ್ನಂತ ಸಾಮಾನ್ಯ ವ್ಯಕ್ತಿಗಳು ಸೂಪರ್ ಸ್ಟಾರ್ ಗಳ ಬಗ್ಗೆ ಹೊಂದಿರುವ ಅಭಿಪ್ರಾಯವನ್ನು ಅವರು ಬದಲಾಯಿಸಿದ್ದಾರೆ. ನಕ್ಷತ್ರಗಳು ನಮ್ಮ ಮಾರ್ಗದರ್ಶಿ ಶಕ್ತಿಯಾಗಿರುತ್ತೆ ಎಂಬ ಕಲ್ಪನೆಯಡಿ ನಾವು ಮಾಡಿರುವ ಕಾನ್ಸೆಪ್ಟ್ ಮೂಡಿ ಬಂದಿದೆ. ನಮ್ಮ ಪ್ರೀತಿ ಪಾತ್ರರು ದೂರವಾದಾಗ ನಕ್ಷತ್ರಗಳಾಗುತ್ತಾರೆ ಎಂದು ನಾವು ನಂಬಿದ್ದೇವೆ. ಅಪ್ಪು ಸರ್ ನಮಗೆಲ್ಲ ಸ್ಟಾರ್ ಆಗಿದ್ದರು, ಅವರ ಹೆಸರಲ್ಲಿ ಒಂದು ನಕ್ಷತ್ರ ಇರಬೇಕೆಂದು ನಾವು ಬಯಸುತ್ತೇವೆ. ನಮ್ಮೆಲ್ಲರ ಅತ್ಯುತ್ತಮ ಸ್ಪೂರ್ತಿಯ ಶಕ್ತಿಗೆ ಇದು ನಮ್ಮ ಚಿಕ್ಕ ಕೊಡುಗೆ ಎಂದು ತಿಳಿಸಿದ್ದಾರೆ. 

ಬಿಗ್ ಲಿಟ್ಲ್ ಕಂಪನಿ ಬಿಡುಗಡೆ ಮಾಡಿರುವ ಅಪ್ಪುಗೆ ಗೌರವ ಸಲ್ಲಿಸುವ ಈ ವೀಡಿಯೋ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಸಖತ್ ವೈರಲ್ ಆಗಿದೆ. ವಿಕ್ರಮ್ ರವಿಚಂದ್ರನ್ ಹಾಗೂ `ಬಿಗ್ ಲಿಟ್ಲ್` ತಂಡ ವೀಡಿಯೋವನ್ನು ಮೆಚ್ಚಿ ಹಂಚಿಕೊಂಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದ ತಿಳಿಸಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed