ಮಾಸಾಂತ್ಯಕ್ಕೆ ?ಮಲ್ಲಿಕಾರ್ಜುನ
Posted date: 14/May/2011

     ಎಸ್.ಎಸ್ ಕಂಬೈನ್ಸ್ ಲಾಂಛನದಲ್ಲಿ ಡಿ.ರಾಜಕುಮಾರ್ ಅರ್ಪಿಸಿ, ದಿನೇಶ್‌ಗಾಂಧಿ ನಿರ್ಮಿಸಿರುವ ‘ಮಲ್ಲಿಕಾರ್ಜುನ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು\ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಈ ತಿಂಗಳ ಕೊನೆಯಲ್ಲಿ ತೆರೆ ಕಾಣಲಿದೆ.


     ಮುರಳಿಮೋಹನ್ ನಿರ್ದೇಶನದ ಈ ಚಿತ್ರದಲ್ಲಿ ರವಿಚಂದ್ರನ್ ದ್ವಿಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದ ನಾಯಕಿಯರಾಗಿ ಸೀತಾ ಹಾಗೂ ಸದಾ ಅಭಿನಯಿಸಿದ್ದಾರೆ. ರಮ್ಯಾಬಾರ್ನಾ, ಸುದೀಪ್‌ತೋ, ಆಶೀಷ್‌ವಿದ್ಯಾರ್ಥಿ, ಹೇಮಾಚೌಧರಿ, ಆದಿಲೋಕೇಶ್, ಎಂ.ಎನ್.ಲಕ್ಷ್ಮೀದೇವಿ, ರಾಜುತಾಳಿಕೋಟೆ, ದಿನೇಶ್‌ಗಾಂಧಿ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ.


    ಜಿ.ಎಸ್.ವಿ ಸೀತಾರಾಂ ಛಾಯಾಗ್ರಹಣ ಹಾಗೂ ಎಸ್.ಎ.ರಾಜಕುಮಾರ್ ರವರ ಸಂಗೀತವಿರುವ  ‘ಮಲ್ಲಿಕಾರ್ಜುನ ಚಿತ್ರಕ್ಕೆ ಬೆಂಗಳೂರು, ಸಕಲೇಶಪುರ ಹಾಗೂ ವಿದೇಶದಲ್ಲಿ ಚಿತ್ರೀಕರಣ ನಡೆದಿದೆ.  Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed