ಬಿಡುಗಡೆಯಾಯಿತು ``ಗಾಳಿಪಟ 2`` ಚಿತ್ರದ ಮತ್ತೊಂದು ಸುಂದರ ಹಾಡು
Posted date: 25 Mon, Jul 2022 07:56:49 AM
ರಮೇಶ್‌ ರೆಡ್ಡಿ ಅವರ ನಿರ್ಮಾಣದ, ಯೋಗರಾಜ್ ಭಟ್  ನಿರ್ದೇಶನದ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ ``ಗಾಳಿಪಟ 2``ಚಿತ್ರ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಕುತೂಹಲ ಹುಟ್ಟಿಸಿದೆ. ಚಿತ್ರ ಬಿಡುಗಡೆಗೆ ಅಭಿಮಾನಿ ಸಮೂಹ ಕಾತುರದಿಂದ ಕಾಯುತ್ತಿದೆ.

ಈ ಚಿತ್ರಕ್ಕಾಗಿ ಜಯಂತ ಕಾಯ್ಕಿಣಿ ಅವರು ಬರೆದಿರುವ ``ನೀನು ಬಗೆಹರಿಯದ ಹಾಡು`` ಎಂಬ ಗೀತೆ ಇತ್ತೀಚೆಗೆ ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು ಖ್ಯಾತ ಗಾಯಕ ನಿಹಾಲ್ ತಾವ್ರೋ ಹಾಡಿದ್ದಾರೆ.
ಪವನ್ ಕುಮಾರ್ ಹಾಗೂ ಶರ್ಮಿಳಾ ಮಾಂಡ್ರೆ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಕುದುರೆಮುಖದ ಸುಂದರ ಪರಿಸರದಲ್ಲಿ ಈ ಹಾಡಿನ‌ ಚಿತ್ರೀಕರಣ ನಡೆದಿದೆ. ಧನು ನೃತ್ಯ ನಿರ್ದೇಶನ ಮಾಡಿದ್ದಾರೆ.

ಸದ್ಯದಲ್ಲೇ ಟೀಸರ್, ಟ್ರೇಲರ್ ಹಾಗೂ ಇನ್ನೂ ಎರಡು ಹಾಡುಗಳ ಬಿಡುಗಡೆಯಾಗಲಿದೆ. ಆಗಸ್ಟ್ 12 ಕ್ಕೆ ಚಿತ್ರ ತೆರೆಗೆ ಬರಲಿದೆ.

ಗೋಲ್ಡನ್ ಸ್ಟಾರ್ ಗಣೇಶ್, ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಅನಂತನಾಗ್, ಸುಧಾ ಬೆಳವಾಡಿ, ಬುಲೆಟ್ ಪ್ರಕಾಶ್, ಪದ್ಮಜಾರಾವ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಸಂತೋಷ್ ರೈ ಪಾತಾಜೆ ಈ ಚಿತ್ರದ ಛಾಯಾಗ್ರಹಕರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed