ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಪ್ರಶಸ್ತಿ ಗೆದ್ದ ಯದ್ಭವಂ ತದ್ಭವತಿ
Posted date: 25 Mon, Jul 2022 08:00:21 AM
ಬಿ ಸಿ ಡಿ ಸ್ಟುಡಿಯೋಸ್ ಸಂಸ್ಥೆ ಇಂದ ನಿರ್ಮಿಸಿದ ``ಯದ್ಭಾವಂ ತದ್ಭವತಿ``ಕನ್ನಡ, ಚಲನಚಿತ್ರದ ಚಿತ್ರೀಕರಣ ಚನ್ನಪಟ್ಟಣ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣವನ್ನು ಮುಗಿಸಿ ಸೆನ್ಸಾರ್  ಮಂಡಳಿಯಿಂದ ಯು/ ಎ ಸರ್ಟಿಫಿಕೇಟ್ ಪಡೆದುಕೊಂಡಿರುತ್ತದೆ.

 ಚಿತ್ರದಲ್ಲಿ  ಅಮಿತ್ ರಾವ್  ಅವರೇ ನಿರ್ದೇಶನ ಹಾಗೂ ನಟನೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು ಹಾಗೂ ಛಾಯಾಗ್ರಾಹಕರಾಗಿ  ಸುದೀಪ್ ಪೆಟ್ರಿಕ್,
ಸಂಗೀತ ನಿರ್ದೇಶಕ ರಾಕಿ ಸೋನು,
 ಸಂಕಲನ ಶಿವರಾಜ್ ಮೆಹು ,
 D I ಮತ್ತು Vfx ಸುಪ್ರೀತ್ ಬಿಕೆ,
ಸಾಹಿತ್ಯ ನವೀನ್ ರೈ,
ಕಾಸ್ಯೂಮ್ ಡಿಸೈನರ್ ರಶ್ಮಿ ಅನುಪ್ ರಾವ್, 
ಸಹ ನಿರ್ಮಾಪಕರಾಗಿ R ಶ್ರೀನಿವಾಸ ಶೆಟ್ಟಿ,
 ತಂಡದಲ್ಲಿದ್ದು  ಇತ್ತೀಚೆಗೆ ನಡೆದ  ರೋಷಿನಿ ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್ ಔರಂಗಬಾದ್ ಮಹಾರಾಷ್ಟ್ರ ದಲ್ಲಿ 24/07/2022 ರಂದು  "ಅತ್ಯುತ್ತಮ ನಟ" ಪ್ರಶಸ್ತಿ ಮತ್ತು "ಅತ್ಯುತ್ತಮ ಕಥೆ" ಪ್ರಶಸ್ತಿಯನ್ನು ಅಮಿತ್ ರಾವ್ ರವರು ಪಡೆದುಕೊಂಡಿರುತ್ತಾರೆ. ಹಲವಾರು ಇಂಟರ್ನ್ಯಾಷನಲ್ ಫಿಲಂ ಫೆಸ್ಟಿವಲ್‌ಗಳಲ್ಲಿ  ಈಗಾಗಲೇ 36 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು ಈಗ ಪಡೆದಿರುವ 2 ಪ್ರಶಸ್ತಿಗಳನ್ನು ಸೇರಿಸಿ 38 ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದೆ ಕನ್ನಡದ ಯದ್ಭಾವಂ ತದ್ಭವತಿ ಚಿತ್ರ.

 ಇನ್ನು ಹೆಚ್ಚಿನ ಮಾಹಿತಿಯೊಂದಿಗೆ ಅತಿ ಶೀಘ್ರದಲ್ಲಿ  ಚಿತ್ರತಂಡ  ಚಿತ್ರದ ಟೀಸರ್ ಬಿಡುಗಡೆ ಮಾಡುವ ಮುಖಾಂತರ ಚಿತ್ರದ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದು  ಚಿತ್ರದ ನಿರ್ಮಾಪಕರಾದ ಮಂಜುನಾಥ್ ದೈವಜ್ಞ& ಅಮಿತ್ ರಾವ್ ಅವರು ತಿಳಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed