ಬೆಂಗಳೂರಿನಲ್ಲಿ ಸಿಮ್ಟಾ ಆಸ್ಟ್ರಿಕ್ಸ್ ಶಾಖೆ
Posted date: 25 Sat, Feb 2023 08:39:43 AM
ಮರದ ಲೇಪನ ಹೊಂದಿರುವ ಯುಪಿವಿಸಿ ಹಾಗೂ ಎಬಿಎಸ್‌ಯ ವಿನೂತನ ರೀತಿಯ ಕಿಟಕಿಗಳು ಹಾಗೂ ಬಾಗಿಲುಗಳು ಮತ್ತು ತಯಾರು ಮಾಡುತ್ತಿರುವ ’ಸಿಮ್ಟಾ ಆಸ್ಟ್ರಿಕ್ಸ್’ ಸಂಸ್ಥೆಯು ಕಳೆದ ಹತ್ತು ವರ್ಷಗಳಿಂದ ಕರ್ನಾಟಕದ ಮಾರುಕಟ್ಟೆಯಲ್ಲಿ ಉತ್ತಮ ಬಾಂಧವ್ಯವನ್ನು ಸಂಪಾದಿಸಿದೆ. ಇದರನ್ವಯ ಮೊದಲ ಅನುಭವಿ ಶಾಖೆಯು ಬೆಂಗಳೂರು ಜಯನಗರದ ಐದನೇ ಹಂತದಲ್ಲಿ ಪ್ರಾರಂಭಗೊಂಡಿತು.
 
ಬ್ರಿಗೇಡ್ ಎಂಟರ್‌ಪ್ರೈಸಸ್ ಅಧ್ಯಕ್ಷರಾದ ಎಂ.ಪಿ.ಮಂಜುನಾಥ್‌ಪ್ರಸಾದ್ ಮತ್ತು ವಾಲ್‌ಫರ್ ಆರ್ಕಿಟೆಕ್ಟ್‌ಸ್‌ನ ಮುಖ್ಯ ವಾಸ್ತು ಶಿಲ್ಪಿ ಪ್ರಾಚಿಪಾಂಡೆ ಶಾಖೆಗೆ ಚಾಲನೆ ನೀಡಿ ಶುಭ ಹಾರೈಸಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಪತ್‌ಕುಮಾರ್, ನಿರ್ದೇಶಕರುಗಳಾದ ಸೆಂತಿಲ್‌ಕುಮಾರ್, ಗಣೇಶ್, ಕನಗರಾಜ್ ಹಾಗೂ ದೊರೈ ಇದೇ ಸಂದರ್ಭದಲ್ಲಿ ಉಪಸ್ತಿತರಿದ್ದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed