ಅರಸಿಕೆರೆಯಲ್ಲಿ ?ಶಾಕ್?
Posted date: 11/August/2010

     ಶ್ರೀಸಂಕೇಶ್ವರ ಫ಼ಿಲಂಸ್ ಲಾಂಛನದಲ್ಲಿ ಅಮರಚಂದ್ ಜೈನ್, ವಿಜಯ್ ಸುರಾನಾ, ಮಂಗೀಲಾಲ್ ಜೈನ್ ಮತ್ತು ರಮೇಶ್ ರವರು ನಿರ್ಮಿಸುತ್ತಿರುವ ‘ಶಾಕ್’ ಚಿತ್ರದ ಚಿತ್ರೀಕರಣ ಅರಸಿಕೆರೆಯಲ್ಲಿ ಆರಂಭವಾಗಿದೆ.


     ರಮೇಶ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರವನ್ನು ಹ.ಸೂ ರಾಜಾಶೇಖರ್ ನಿರ್ದೇಶಿಸುತ್ತಿದ್ದಾರೆ. ಸುಮಾಗುವಾ ನಾಯಕಿಯಾಗಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನೀನಾಸಂ ಅಶ್ವತ್ ಇದ್ದಾರೆ.


      ವಿಭಿನ್ನ ಕಥೆಯನ್ನೊಳಗೊಂಡ ಈ ಚಿತ್ರದ ಚಿತ್ರೀಕರಣ ಒಂದೇ ಮನೆಯಲ್ಲಿ ನಡೆಯಲಿದೆ.  ಚಿತ್ರಕ್ಕೆ ಚಿತ್ರಕಥೆ, ಹಾಗೂ ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ. ನಿರಂಜನಬಾಬು ಛಾಯಾಗ್ರಹಣ, ಶ್ರೀನಿವಾಸ್‌ರೆಡ್ಡಿ ಸಂಕಲನ, ಬಾಬುಖಾನ್ ಕಲಾನಿರ್ದೇಶನ ಹಾಗೂ ಜಾನಿ ಅವರ ಸಾಹಸ ನಿರ್ದೇಶನವಿರುವ ‘ಶಾಕ್’ ಚಿತ್ರದಲ್ಲಿ ನಾಯಕ ರಮೇಶ್ ಸೈಕೊ ಪಾತ್ರ ನಿರ್ವಹಿಸುತ್ತಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed