ಮಾಲ್ಡೀವ್ಸ್‌ನಿಂದ ಶ್ರೀಮತಿ ವಾಪಸ್
Posted date: 7/October/2009

ತಾರಾ ದಂಪತಿಗಳಾದ ಉಪೇಂದ್ರ-ಪ್ರಿಯಾಂಕ ಒಟ್ಟಾಗಿ ನಟಿಸುತ್ತಿರುವ ಶ್ರೀಮತಿ ಚಿತ್ರದ ಹಾಡು ಹಾಗೂ ಕೆಲ ದೃಶ್ಯಗಳನ್ನು ಮಾಲ್ಡೀವ್ಸ್‌ನ ಸುಂದರ ಮನಮೋಹಕ ತಾಣಗಳಲ್ಲಿ ಎಂಟು ದಿನಗಳ ಕಾಲ ಚಿತ್ರೀಕರಿಸಿಕೊಂಡು ಬಂದಿದ್ದೇವೆಂದು ನಿರ್ಮಾಪಕ ಆರ್.ಶಂಕರ್ ತಿಳಿಸಿದ್ದಾರೆ.  ಇದರೊಂದಿಗೆ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಇದ್ದು ಅದನ್ನು ಬೆಂಗಳೂರಿನಲ್ಲಿ ಸೆಟ್ ಹಾಕಿ ಚಿತ್ರೀಕರಿಸಲಾಗುವುದು. ಈಗಾಗಲೇ ಒಟ್ಟು ೪೫ ದಿನಗಳ ಚಿತ್ರೀಕರಣವನ್ನು ಮಾಡಲಾಗಿದೆ. ಮಾಲ್ಡೀವ್ಸ್‌ನಲ್ಲಿ ನಡೆದ ಹಾಡಿನ ಚಿತ್ರೀಕರಣದಲ್ಲಿ ೨೦ ಜನ ಅಲ್ಲಿನ ನೃತ್ಯ ಕಲಾವಿದರು ಭಾಗವಹಿಸಿದ್ದರು.  ರೇಖಾ ಪ್ರಕಾಶ್ ನೃತ್ಯ ಸಂಯೋಜನೆ ಮಾಡಿದ್ದರು.  ಜಾನಿಲಾಲ್‌ರ ಛಾಯಾಗ್ರಹಣ ಇರುವ ಈ ಚಿತ್ರವನ್ನು ಸಂಪತ್ ನಂದಿ ನಿರ್ದೇಶಿಸುತ್ತಿದ್ದಾರೆ. ಪೆಂಡ್ಯಾಲ ಕೃಷ್ಣರ ಸಂಗೀತ ಸಂಯೋಜನೆ,   ಉಪೇಂದ್ರರ ಚಿತ್ರಕಥೆ ಹಾಗೂ ಸಂಭಾಷಣೆ ಇದೆ.   ಬಾಲಿವುಡ್ ಬೆಡಗಿ ಸಲೀನ ಜೆಟ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಹಿಂದಿಯ ಹಿರಿಯ ನಟ ಪ್ರೇಮ್ ಚೋಪ್ರಾ, ಸಯ್ಯಾಜಿ ಸಿಂಧೆ, ಕೋಟಾ ಶ್ರೀನಿವಾಸರಾವ್ ಉಳಿದ ತಾರಾಗಣದಲ್ಲಿದ್ದಾರೆ.  

 

Manohar. R.(Manu),
chitrataramanu@gmail.com
Photo Journalist
M: 9845549026
  : 9844904440

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed