ಅಪ್ಪು-ಪಪ್ಪು ಹಾಡಿನೊಂದಿಗೆ ಮುಕ್ತಾಯ
Posted date: 14/April/2010

ಸೌಂದರ್ಯ ಜಗದೀಶ್ ಫಿಲಂಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಚಿತ್ರ ಅಪ್ಪು-ಪಪ್ಪು. ಬಾಲಿವುಡ್ ಚಿತ್ರಗಳಲ್ಲಿ ಅನಿಮೇಷನ್ ಉಪಯೋಗಿಸಿ ಡೈನೋಸಾರ್ ಮೊದಲಾದ ಪ್ರಾಣಿಗಳ ಸಾಹಸಗಳನ್ನು ತೆರೆಯ ವಲೆ ತೋರಿಸುತ್ತಾರೆ. ಆದರೆ ಚಿತ್ರದಲ್ಲಿ ಯಾವುದೇ ಅನುಮೇಷನ್ ಬಳಸದೆ ಕಾಂಬೋಡಿಯಾದ ಓರಂಗಟಾನ್ ಎಂಬ ಚಿಂಪಾಂಜಿಯೊಂದು ಮಾ|| ಸ್ನೇಹಿತ್ ಎಂಬ ಮಗುವಿನೊಂದಿಗೆ ನಡೆಸುವ ಚಮತ್ಕಾರಗಳನ್ನು ಈ ಚಿತ್ರದಲ್ಲಿ ನಿರೂಪಿಸಲಾಗಿದೆ. ಕಾಂಬೋಡಿಯಾದಲ್ಲಿ ೩೫ ದಿನಗಳ ಕಾಲ ಆ ಪ್ರಾಣಿಯ ಭಾಗದ ಚಿತ್ರೀಕರಣ ಮುಗಿಸಿಕೊಂಡು ಬಂದು ಬೆಂಗಳೂರಿನಲ್ಲಿ ನಿರಂತರ ಚಿತ್ರಣ ನಡೆಸಿ ಮುಕ್ತಾಯಗೊಳಿಸಲಾಗಿದೆ. ವರ್ತೂರು ಬಳೀ ಇರುವ ಗುಂಜೂರು ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಬೃಹತ್ ಸೆಟ್ ಹಾಕಿ ಮಾ|| ಸ್ನೇಹಿತ್ ಶ್ರೀ ಮಾರುತಿದೇವರನ್ನು ಬೇಡಿಕೊಳ್ಳುವ ಹಾಡೊಂದನ್ನು ಚಿತ್ರೀಕರಿಸಲಾಗಿದೆ. ಅಲ್ಲದೆ ಆ ಮಗುವಿನ ಇಂಟ್ರೊಡಕ್ಷನ್ ಸಾಂಗ್‌ವೊಂದನ್ನು ಬೆಂಗಳೂರು ಯೂನಿವರ್ಸಿಟಿಯ ಸಾಯಿಗ್ರೌಂಡ್ಸ್, ಮಿನಿರ್ವಮಿಲ್ ಆವರಣ, ಹಾಗೂ ಇನ್ನೋವೇಟಿವ್ ಫಿಲಂಸಿಟಿಯಲ್ಲಿ ಚಿತ್ರೀಕgಸುವುದರೊಂದಿಗೆ ಕ್ಯಾಮೆರಾ ಕೆಲಸಕ್ಕೆ ಮಂಗಳ ಹಾಡಲಾಗಿದೆ. ಈ ಹಾಡಿನ ಚಿತ್ರಣದಲ್ಲಿ ೧೫೦ ಕ್ಕೂ ಹೆಚ್ಚು ಮಕ್ಕಳನ್ನು ಬಳಸಿಕೊಳ್ಳಲಾಗಿದೆ. ಆರ್. ಅನಂತರಾಜು ಕಥೆ ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರವನ್ನು ವಿಜಯಕಿರಣ್ ಹಾಗೂ ಸೌಂದರ್ಯ ಜಗದೀಶ್ ನಿರ್ಮಿಸುತ್ತಿದ್ದಾರೆ. ಎಸ್. ಕೃಷ್ಣರ ಛಾಯಾಗ್ರಹಣ, ಹಂಸಲೇಖರ ಸಂಗೀತ ಹಾಗೂ ರಾಂನಾರಾಯಣರ ಸಾಹಿತ್ಯ ಈ ಚಿತ್ರಕ್ಕಿದೆ. ಅಬ್ಬಾಸ್ ರೇಖಾ, ರಂಗಾಯಣರಘು, ಕೋಮಲ್, ಜನೀಫರ್ ಹಾಗೂ ನಿರ್ಮಾಪಕ ಸೌಂದರ್ಯ ಜಗದೀಶ್‌ರ ಪುತ್ರ ಮಾ|| ಸ್ನೇಹಿತ್ ಅಭಿನಯಿಸಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed