3ನೇ ವಾರವೂ ನಿನ್ನ ಸನಿಹಕೆ‌ಹೌಸ್ ಫುಲ್
Posted date: 25 Mon, Oct 2021 11:41:47 AM
ಸಲಗ ಕೋಟಿಗೊಬ್ಬ ಚಿತ್ರಗಳ‌ನಡುವೆ ನಿಂತುಕೊಂಡ ನಿನ್ನ‌ಸನಿಹಕೆ‌. 25ನೇ ದಿನದ ಹೊಸ್ತಿಲಲ್ಲಿ ನಿನ್ನ ಸನಿಹಕೆ ಚಿತ್ರಕ್ಕೆ ಬಂಪರ್ ಆಫರ್..!
ನಿನ್ನ ಸನಿಹಕೆ‌ ಚಿತ್ರಕ್ಕೆ ಸೂಪರ್ ಬ್ಯುಸಿನೆಸ್ ಆಫರ್...!  ಟಿವಿ,ಡಿಜಿಟಲ್, ಡಬ್ಬಿಂಗ್ ಗೆ ಬಂತು ಬೇಡಿಕೆ. ಮಲ್ಟಿಪ್ಲೆಕ್ಸ್ ಗಳಲ್ಲಿ‌ ಲವ್ ಫ್ಯಾಮಿಲಿ‌ ಎಂಟ್ರಟೈನ್ಮೆಂಟ್ಗೆ ಕನ್ನಡ ಪ್ರೇಕ್ಷಕರು ಬಹುಪರಾಕ್ .
ನಿನ್ನ ಸನಿಹಕೆ‌ ಸಿನಿಮಾ ಸಿಕ್ತಿರೋ‌ ಕ್ಲಾಸ್ ಮಾಸ್ ರೆಸ್ಪಾನ್ಸ್ ಹಾಗೂ ಡಾ.ರಾಜ್ ಕುಮಾರ್ ಮೊಮ್ಮಗಳ‌ ಚೊಚ್ಚಲ‌ ಸಿನಿಮಾ. ಈ ಎಲ್ಲಾ ಕಾರಣಗಳಿಂದ  ಈ ಚಿತ್ರಕ್ಕೆ ಟಿವಿ ಮತ್ತು ಡಿಜಿಟಲ್ ಬ್ಯುಸಿನೆಸ್ಗೆ ಬೇಡಿಕೆ ಬಂದಿದೆ. ಅದ್ರಂತೆ ಈಗಾಗ್ಲೇ ಚಿತ್ರತಂಡಕ್ಕೆ ಮೂರು ದೊಡ್ಡ ಚಾನೆಲ್ ಗಳಿಂದ ಆಫರ್ ಬಂದಿದ್ದು, ಅಮೇಜಾನ್ ಟೀಮ್‌ ಜೊತೆಗೂ ಚಿತ್ರತಂಡ ಮಾತುಕತೆ ನಡೆಸ್ತಿದೆ. ನಿನ್ನ ಸನಿಹಕೆ ಚಿತ್ರ  ಯಶಸ್ವಿ 25 ದಿನಗಳನ್ನ ಪೂರೈಸೋ ಹೊಸ್ತಿಲಲ್ಲಿರೋ ಹೊತ್ತಲ್ಲೇ ಹೀಗೊಂದು ಗುಡ್ ನ್ಯೂಸ್ ಹೊರಬಂದಿದೆ. ಇದೇ ಖುಷಿಯಲ್ಲಿ, ಇದೇ ಚಿತ್ರತಂಡ ಮತ್ತೊಂದು ಚಿತ್ರ ಮಾಡೋ‌ದಕ್ಕೆ ಯೋಜನೆ ಹಾಕಿಕೊಳ್ತಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed