?ಕೂಲೀ ವಾರ ತೆರೆಗೆ
Posted date: 11/May/2011

ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಶಿಲ್ಪಾ ಗಣೇಶ್ ನಿರ್ಮಿಸಿರುವ ‘ಕೂಲ್ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬೆಂಗಳೂರು, ಮೈಸೂರು ಹಾಗೂ ದುಬೈ, ಈಜಿಪ್ಟ್, ಜೋಡನ್ ಮುಂತಾದ ಕಡೆ ಚಿತ್ರದ ಚಿತ್ರೀಕರಣ ನಡೆದಿದೆ. ನಟನಾಗಿ ಅಭಿಮಾನಿಗಳ ಮನ ಗೆದ್ದಿರುವ ಗಣೇಶ್ ಈಗ ನಟನೊಂದಿಗೆ ನಿರ್ದೇಶಕ ಕೂಡ ಆಗಿದ್ದಾರೆ. ಇದು ಅವರ ನಿರ್ದೇಶನದ ಚೊಚ್ಚಲ ಚಿತ್ರ. ಉತ್ತಮ ಕಥಾಹಂದರ ಹೊಂದಿರುವ ಈ ಚಿತ್ರ ನೋಡುಗರಿಗೆ ಮೆಚ್ಚುಗೆ ಆಗಲಿದೆ ಎನ್ನುತ್ತಾರೆ ಗಣೇಶ್.
     ‘ಕೂಲ್ಗೆ ಖ್ಯಾತ ಛಾಯಾಗ್ರಾಹಕ ರತ್ನವೇಲು ರವರ ಛಾಯಾಗ್ರಹಣವಿದೆ. ‘ಘಜನಿ ಖ್ಯಾತಿಯ ಸಂಕಲನಕಾರ ಆಂಟನಿಯವರ ಸಂಕಲನವಿದೆ. ರಮೇಶ್‌ದೇಸಾಯಿ ಕಲಾ ನಿರ್ದೆಶನ, ವಿ.ಹರಿಕೃಷ್ಣರ ಸಂಗೀತ, ರವಿಶಂಕರ್ ನಿರ್ಮಾಣ ನಿರ್ವಹಣೆ, ದತ್ತಣ್ಣ, ಯತೀಶ್‌ಕುಮಾರ್ ಮೇಲ್ವಿಚಾರಣೆ ಈ ಚಿತ್ರಕ್ಕಿದೆ. ಗಣೇಶ್, ಸನಾಖಾನ್, ಸಾಧುಕೋಕಿಲಾ, ದೀಪಾ ಶೆಟ್ಟಿ, ಶರಣ್, ಸಂಗೀತಾ ಶೆಟ್ಟಿ, ದತ್ತಣ್ಣ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed